ಜಿ.ಶಂಕರ್ಗೆ ಪಂಚವರ್ಣ ಕನ್ನಡ ರಾಜ್ಯೋತ್ಸವ ಗೌರವ ಪ್ರದಾನ
ಕೋಟ, ನ.7: ಕೋಟದ ಪಂಚವರ್ಣ ಯುವಕ ಮಂಡಲ ಮತ್ತು ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಕೋಟದ ಮಾಂಗಲ್ಯ ಮಂದಿದ ಸಮೀಪ ಹಿರೇ ಮಹಾಲಿಂಗೇಶ್ವರ ರಥಬೀದಿಯಲ್ಲಿ ಸದ್ಭಾವನಾ- 2026ರ ಶೀರ್ಷಿಕೆಯಡಿ ನಡೆದ ಸಮಾರಂಭದಲ್ಲಿ ಡಾ.ಜಿ.ಶಂಕರ್ ಅವರಿಗೆ ಪಂಚವರ್ಣ ಕನ್ನಡ ರಾಜ್ಯೋತ್ಸವ ಗೌರವ ಪ್ರದಾನ ಮಾಡಲಾಯಿತು.
ಡಾ.ಜಿಶಂಕರ್ ರವರಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪಂಚವರ್ಣ ರಾಜ್ಯೋತ್ಸವ ಗೌರವ ಪ್ರದಾನಿಸಿ ದರು. ಕಾರ್ಯಕ್ರಮವನ್ನು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್ ಉದ್ಘಾಟಿಸಿ ಸಂತೋಷ್ ಮೇಷ್ಟ್ರು ವಿದ್ಯಾನಿಧಿಯನ್ನು ಸ್ಥಳೀಯ ಕನ್ನಡ ಮಾಧ್ಯಮ ಶಾಲೆಗಳ ಮುಖ್ಯಸ್ಥರಿಗೆ ಹಸ್ತಾಂತರಿಸಿದರು.
ಪಂಚವರ್ಣ ವಿಶೇಷ ಪುರಸ್ಕಾರವನ್ನು ಕನ್ನಡಪರ ಹೋರಾಟಗಾರ ಯುವ ಉದ್ಯಮಿ ಕೆ.ಎನ್.ಶ್ರೀನಿವಾಸ ಜೋಗಿ ಬೆಂಗಳೂರು ಅವರಿಗೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಪ್ರದಾನ ಮಾಡಿದರು. ಅಂತಾರಾಷ್ಟ್ರೀಯ ಕರಾಟೆಪಟು ಹರ್ತಟ್ಟು ಜಯ ಪೂಜಾರಿ ಮುಂಬೈ ವಿಶೇಷ ಅಭಿನಂದನೆಯನ್ನು ಮುಂಬೈ ಸಮಾಜಸೇವಕ ಬಡಾಮನೆ ರತ್ನಾಕರ ಶೆಟ್ಟಿ ಗಿಳಿಯಾರು ನೀಡಿ ಗೌರವಿಸಿದರು.
ಸ್ಥಳೀಯ ಚೆಚ್ಕೆರೆ ಅಂಗನವಾಡಿಗೆ ಸೃಷ್ಟಿ ಇಂಜಿನಿಯರಿಂಗ್ ಮಣಿಪಾಲ ಸಮವಸ್ತ್ರವನ್ನು ಹಸ್ತಾಂತರಿಸಿದರು. ಕಾರ್ಕಳದ ಹೊಸಬೆಳಕು ಅನಾಥಾ ಶ್ರಮದ ಮುಖ್ಯಸ್ಥೆ ತನುಲ ಅವರಿಗೆ ರಾಜ್ಯ ಕರಕುಶಲ ನಿಗಮದ ಮಾಜಿ ಅಧ್ಯಕ್ಷ ಡಾ.ಬೇಳೂರು ರಾಘವೇಂದ್ರ ಶೆಟ್ಟಿ ದಿನಸಿ ಕಿಟ್ ಹಸ್ತಾಂತರಿಸಿದರು. ಬನ್ನಾಡಿ ಪದ್ದು ಆಚಾರ್ ಸ್ಮರಣಾರ್ಥ ಅನಾ ರೋಗ್ಯ ನಿಧಿಯನ್ನು ನಾರಾಯಣ ಆಚಾರ್ ಪರವಾಗಿ ಸಹೋದರ ಸೀತರಾಮ ಆಚಾರ್ ಸಾಂಕೇತಿಕವಾಗಿ ಫಲಾನುಭಗಳಿಗೆ ಹಸ್ತಾಂತರಿಸಿದರು.
ಎರಡು ಲಕ್ಷ ರೂ ವೆಚ್ಚದಲ್ಲಿ ನೀಡಲಾಗುವ ಶ್ರೀಕೃಷ್ಣಪ್ರಸಾದ್ ಫೌಂಡೇಶನ್ ಶೈಕ್ಷಣಿಕ ನಿಧಿಯನ್ನು ಶ್ರೀ ಕೃಷ್ಣ ಪ್ರಸಾದ್ ಫೌಂಡೇಶನ್ ಪ್ರವರ್ತಕ ಸಂಪತ್ ಕುಮಾರ್ ಶೆಟ್ಟಿ ಫಲಾನುಭವಿ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು.
ಈ ವರ್ಷದ ಹಸಿರು ಹೆಜ್ಜೆ ಅತ್ಯುತ್ತಮ ಗಿಡ ಪೋಷಣೆಗಾಗಿ ಮೂವರು ವಿದ್ಯಾರ್ಥಿಗಳಿ ಬೆಳ್ಳಿ ನಾಣ್ಯವನ್ನು ಪಂಚ ವರ್ಣದ ಸ್ಥಾಪಕ ಶೇವಧಿ ಸುರೇಶ್ ಗಾಣಿಗ ವಿತರಿಸಿದರು. ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ ವಹಿಸಿದ್ದರು.
ಗುತ್ತಿಗೆದಾರ ಸುರೇಶ್ ಕಾಂಚನ್ ಬಾರಿಕೆರೆ ಅಭಿನಂದನಾ ನುಡಿಗಳನ್ನಾಡಿದರು. ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ರವೀಶ್ ಶ್ರೀಯಾನ್ ಕೊರವಡಿ, ಪಂಚವರ್ಣ ಯುವಕ ಮಂಡಲದ ಗೌರವಾಧ್ಯಕ್ಷ ಸತೀಶ್ ಎಚ್. ಕುಂದರ್, ಮಹಿಳಾ ಮಂಡಲದ ಗೌರವಾಧ್ಯಕ್ಷೆ ಕುಸುಮಾ ದೇವಾಡಿಗ, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು.
ಗೌರವ ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿ ಪ್ರಾಸ್ತಾವನೆಗೈದರು. ಶಿಕ್ಷಕ ಚಂದ್ರಶೇಖರ್ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್ ವಂದಿಸಿದರು.