ಉಡುಪಿ: ‘ಮೌಲ್ಯ ಚಿಂತನಾ ಶಿಬಿರ’ ಕಾರ್ಯಕ್ರಮ
ಉಡುಪಿ, ನ.7: ಉಡುಪಿ ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜು ವತಿಯಿಂದ ಪಂಚಮ ವರ್ಷಾಚರಣೆ ಕಾರ್ಯಕ್ರಮ ಸರಣಿ 3ರ ಅಂಗವಾಗಿ ಮೌಲ್ಯ ಚಿಂತನಾ ಶಿಬಿರ’ವನ್ನು ಇತ್ತೀಚೆಗೆ ಕಾಲೇಜಿನ ಅಮೃತ ಮಹೋತ್ಸವದ ಕಟ್ಟಡದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ಶ್ರೀ ಯುಗೇಶಾನಂದಜಿ ಉದ್ಘಾಟಿಸಿದರು. ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆಡಳಿತಾಧಿಕಾರಿ ಡಾ.ಕೆ.ಶ್ರೀಧರ ಆರ್. ಪೈ ಅಧ್ಯಕ್ಷತೆ ವಹಿಸಿದ್ದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಗಾಯತ್ರಿ ಜಿ.ಪೈ, ಉಪಪ್ರಾಂಶುಪಾಲ ಹಾಗು ಬಿಸಿಎ ಸಂಯೋಜಕ ಡಾ.ಎಂ.ವಿಶ್ವನಾಥ ಪೈ, ಬಿಕಾಂ, ಬಿಬಿಎ ಸಂಯೋಜಕ ಡಾ.ಮಲ್ಲಿಕಾ ಎ.ಶೆಟ್ಟಿ, ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಮಾಲತಿ ದೇವಿ, ಟಿ.ಮೋಹನದಾಸ್ ಪೈ ಕೌಶಲ್ಯ ಕೇಂದ್ರದ ನಿರ್ದೇಶಕ ಟಿ.ರಂಗ.ಪೈ ಉಪಸ್ಥಿತರಿದ್ದರು.
ಮಹಾತ್ಮ ಗಾಂಧಿ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ಎಸ್ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಪೂರ್ವಾಹ್ನ ನಡೆದ ಪ್ರಥಮ ಗೋಷ್ಠಿಯಲ್ಲಿ ಪತ್ರಕರ್ತ ಡಾ.ನರೇಂದ್ರ ರೈ ದೇರ್ಲ ಶಿಕ್ಷಣ-ಜೀವನ ಮೌಲ್ಯಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ದ್ವಿತೀಯ ಗೋಷ್ಠಿಯಲ್ಲಿ ಮಂಗಳೂರಿನ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಓ.ಆರ್.ಪ್ರಕಾಶ್ ಜೀವನ ಕೌಶಲಗಳು - ಪ್ರಕರಣ ಅಧ್ಯಯನ’ ಎಂಬ ವಿಷಯದ ಕುರಿತು ಮಾತನಾಡಿದರು.
ಪ್ರೊ.ವರದೇಶ ಹಿರೇಗಂಗೆ ಸಮನ್ವಯಕಾರರಾಗಿ ಕಾರ್ಯನಿರ್ವಹಿಸಿದರು. ಡಾ.ಗಣನಾಥ ಎಕ್ಕಾರ್ ಹಾಗೂ ಡಾ. ಪಾರ್ವತಿ ಜಿ ಐತಾಳ ಸಂವಾದದಲ್ಲಿ ಭಾಗವಹಿಸಿ ತಮ್ಮ ವಿಚಾರಗಳನ್ನು ಹಂಚಿಕೊಂಡರು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ ಶೆಟ್ಟಿ ಮಾತನಾಡಿದರು.