ಕುಂದಾಪುರ, ನ.7: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ-ಸಂಜೀವಿನಿ ಕೌಶಲಾಭಿವೃದ್ಧಿ, ಉದ್ಯಮ ಲಶೀಲತೆ ಮತ್ತು ಜೀವನೋಪಾಯ ಇಲಾಖೆ, ಉಡುಪಿ ಜಿ.ಪಂ., ಕುಂದಾಪುರ ತಾ.ಪಂ., ಭದ್ರಮಹಾಕಾಳಿ ಸಂಜೀವಿನಿ ಒಕ್ಕೂಟ ಕಟ್‌ಬೆಲ್ತೂರು ಸಂಯುಕ್ತ ಆಶ್ರಯದಲ್ಲಿ ದೀಪಾವಳಿಯ ಪ್ರಯುಕ್ತ ಸಂಜೀವಿನಿ ಸ್ವಸಹಾಯ ಸಂಘದ ಸದಸ್ಯೆಯರಿಂದ ಆಕರ್ಷಕ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ‘ದೀಪ ಸಂಜೀವಿನಿ’ ಕಾರ್ಯಕ್ರಮ ಶುಕ್ರವಾರ ಕುಂದಾಪುರ ಕುಂದೇಶ್ವರ ದೇವಸ್ಥಾನದ ಮುಖಮಂಟಪದ ಬಳಿ ಆರಂಭಗೊಂಡಿತು.

ಕಾರ್ಯಕ್ರಮ ಉದ್ಘಾಟಿಸಿದ ಕುಂದಾಪುರ ತಾಪಂ ಕಾರ್ಯನಿರ್ವ ಹಣಾಧಿಕಾರಿ ಮಹೇಶ್ ಕೆ.ಜಿ. ಮಾತನಾಡಿ, ಸಂಜೀವಿನಿ ಸ್ವಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ದೊರೆಯಲಿ. ಮಹಿಳೆಯರು ಉತ್ತಮ ವ್ಯಾಪಾರ ನಡೆಸುವ ಮೂಲಕ ಹೆಚ್ಚಿನ ಆದಾಯ ಮತ್ತು ಲಾಭ ಗಳಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಲಿ ಎಂದರು.

ತಾಲೂಕು ಪಂಚಾಯತ್ ಸಹಾಯಕ ಲೆಕ್ಕಾಧಿಕಾರಿ ದೀಪಾ, ಸಹಾಯಕ ನಿರ್ದೇಶಕ ಸುಧಾಕರ್, ತಾಪಂ ವ್ಯವಸ್ಥಾಪಕ ಗುರುಮೂರ್ತಿ, ಸಂದೀಪ್, ಸಂಜೀವಿನಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಯತೀಶ್, ಸಂಜೀವಿನಿ ತಾಲೂಕು ಅಭಿಯಾನ ಘಟಕದ ಸಿಬಂದಿ, ವಿವಿಧ ಗ್ರಾಪಂ ಸಂಜೀವಿನಿ ಸಿಬಂದಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಆಲೂರು ಭುವನೇಶ್ವರಿ ಸಂಜೀವಿನಿ ಒಕ್ಕೂಟದ ವತಿಯಿಂದ ತಯಾರಿಸಲಾದ ವಿವಿಧ ಬಗೆಯ ಮಣ್ಣಿನ ಮಡಿಕೆಗಳು, ಅಲಂಕಾರಿಕ ದೀಪಗಳು, ಆಕರ್ಷಕ ಮಣ್ಣಿನ ಹಣತೆಗಳು ಸೇರಿದಂತೆ ವೈವಿಧ್ಯಮಯ ಉತ್ಪನ್ನಗಳು, ವಿವಿಧ ಸಂಜೀವಿನಿ ಸ್ವಸಹಾಯ ಗುಂಪುಗಳ ಮಹಿಳೆಯರು ತಮ್ಮ ಸ್ವೋದ್ಯಮದ ಮೂಲಕ ತಯಾರಿಸಿದ ಉತ್ಪನ್ನ ಗಳೊಂದಿಗೆ ಭಾಗವಹಿಸಿ, ಗ್ರಾಹಕರಿಗೆ ತಮ್ಮ ಉತ್ಪನ್ನ ಪರಿಚಯಿಸುವುದರ ಜತೆಗೆ ವಹಿವಾಟು ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor