ಕೋಟ, ನ.7: ಮೊಬೈಲ್ ಹ್ಯಾಕ್ ಮಾಡಿ ವಾಟ್ಸಾಪ್‌ನಿಂದ ಸಂದೇಶ ಕಳುಹಿಸಿ ಸಾವಿರಾರು ರೂ. ಆನ್‌ಲೈನ್ ವಂಚಿಸಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಯಾನಂದ ಎಂಬರಿಗೆ ಅವರ ಸ್ನೇಹಿತ ತೆಕ್ಕಟ್ಟೆಯ ಅನಂತ ಎಂಬವರ ವಾಟ್ಸಾಪ್‌ನಿಂದ ನ.22ರಂದು ಸಂದೇಶ ಬಂದಿದ್ದು, ಅದರಲ್ಲಿ ನನಗೆ ಅರ್ಜೆಂಟಾಗಿ ಹಣದ ಅಗತ್ಯ ಇದ್ದು, ಕಳುಹಿಸಿರುವ ಕ್ಯೂಆರ್ ಕೋಡ್‌ಗೆ 52,000ರೂ. ಹಣ ಹಾಕುವಂತೆ ತಿಳಿಸಿದ್ದರು.

ಅದರಂತೆ ದಯಾನಂದ ತನ್ನ ಸ್ನೇಹಿತನಾಗಿರುವ ಅನಂತ ಅವರ ಹೆಸರಿನಲ್ಲಿದ್ದ ವಾಟ್ಯಾಪ್ ಕ್ಯೂಆರ್ ಕೋಡ್‌ಗೆ 52,000ರೂ. ಹಣವನ್ನು ಹಾಕಿದ್ದರು. ನಂತರ ವಿಚಾರಿಸಿದಾಗ ಅನಂತ ಅವರ ಮೊಬೈಲ್ ಹ್ಯಾಕ್ ಆಗಿರುವುದು ತಿಳಿದುಬಂದಿದೆ. ಹೀಗೆ ಆನ್‌ಲೈನ್ ಮೂಲಕ ವಂಚಿಸಿರುವ ಬಗ್ಗೆ ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor