ಕೋಟ, ನ.14: ಕೈಕಾಲು ತೊಳೆಯಲು ಹೋದ ವ್ಯಕ್ತಿಯೊಬ್ಬರು ಕೆರೆಗೆ ಬಿದ್ದು ಮೃತಪಟ್ಟ ಘಟನೆ ನ.14ರಂದು ಮಧ್ಯಾಹ್ನ ವೇಳೆ ಕೋಟದಲ್ಲಿ ನಡೆದಿದೆ.

ಮೃತರನ್ನು ಗದಗ ಮೂಲದ ಸಾಸ್ತಾನ ಪಾಂಡೇಶ್ವರದ ಬಾಡಿಗೆ ಮನೆ ನಿವಾಸಿ ನಾಗರಾಜ(41) ಎಂದು ಗುರುತಿಸ ಲಾಗಿದೆ. ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಇವರು, ಒಂದು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಕೆಲಸ ಬಿಟ್ಟು ಊರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು.

ಬೆಳಗ್ಗೆ ಕೋಟ ಅಮೃತೇಶ್ವರಿ ದೇವಸ್ಥಾನದ ಪಕ್ಕದಲ್ಲಿರುವ ವರುಣ ತೀರ್ಥ ಕೆರೆಯಲ್ಲಿ ಕೈಕಾಲು ತೊಳೆಯಲು ಹೋದ ನಾಗರಾಜ್, ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟರೆಂದು ತಿಳಿದುಬಂದಿದೆ. ಸ್ಥಳೀಯ ಈಜುಗಾರರು ಕೆರೆಯಲ್ಲಿ ಹುಡು ಕಾಡಿ ಮಧ್ಯಾಹ್ನ ವೇಳೆ ಮೃತದೇಹವನ್ನು ಮೇಲಕ್ಕೆ ಎತ್ತಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor