ಮಲ್ಪೆ, ನ.14: ಮೊಬೈಲ್‌ಗೆ ಸಂದೇಶ ಕಳುಹಿಸಿ ಲಕ್ಷಾಂತರ ರೂ. ಹಣವನ್ನು ಖಾತೆಯಿಂದ ಕಡಿತಗೊಳಿಸಿ ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ.9ರಂದು ಬೆಳಗ್ಗೆ ಪ್ರಸನ್ನ ಕೊಡವೂರು ಎಂಬವರ ಮೊಬೈಲ್ ಸ್ಕ್ರೀನ್‌ಗೆ ಪ್ಲೇ ಲೂಮ್ ಎಂಬುಜಾಗಿ ಮೆಸೇಜ್ ಬರುತ್ತಿದ್ದು, ಅದನ್ನು ತೆಗೆಯಲು ಪ್ರಸನ್ನ ಪ್ರಯತ್ನಿಸಿದರೂ ಆಗುತ್ತಿರಲಿಲ್ಲ. ಅದರ ಜೊತೆಗೆ ಮೊಬೈಲ್ ಸ್ಕ್ರೀನ್ ಮೇಲೆ ಅಪ್‌ಡೇಟ್ ಎಂದು ಬರುತ್ತಿತ್ತು. ಇದರಿಂದ ಗಾಬರಿಗೊಂಡ ಪ್ರಸನ್ನ, ಮೊಬೈಲನ್ನು ಸ್ವಿಚ್‌ಆಫ್ ಮಾಡಿ ಮೊಬೈಲ್‌ ನಿಂದ ಸಿಮ್ ತೆಗೆದು ನಂತರ ಸ್ವಿಚ್ ಆನ್ ಮಾಡಿದರು.

ನ.10ರಂದು ಮೊಬೈಲ್ ಸ್ವಿಚ್ ಆನ್ ಮಾಡಿದಾಗ ಅಪ್‌ಡೇಟ್ ಎಂದು ಕೇಳುತ್ತಿದ್ದು ಅದಕ್ಕಾಗಿ ಅವರು ಮೊಬೈಲ್‌ನಲ್ಲಿ ರಿಚಾರ್ಜ್ ಮಾಡಲು ಹೋದಾಗ ಬ್ಯಾಂಕ್ ಖಾತೆಗಳಲ್ಲಿ ಹಣ ಇಲ್ಲವಾಗಿ ಬರುತ್ತಿತ್ತು. ಕೂಡಲೇ ಅವರು ತನ್ನ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ ಒಂದು ಖಾತೆಯಿಂದ 1,85,000ರೂ. ಹಾಗೂ ಇನ್ನೊಂದು ಖಾತೆಯಿಂದ 1,18,000 ರೂ. ಸಹಿತ ಒಟ್ಟು 3,03,000ರೂ. ಹಣ ಕಡಿತಗೊಂಡಿರುವುದಾಗಿ ದೂರಿನಲ್ಲಿ ತಿಳಿಸ ಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor