ಉಡುಪಿ, ನ.22: ಉಡುಪಿ ಶ್ರೀಕೃಷ್ಣ ಮಠದ ಗೀತಾ ಮಂದಿರದ ಬಳಿ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ನಡೆದ ಹೊಡೆದಾಟದಲ್ಲಿ ಓರ್ವ ಗಾಯ ಗೊಂಡ ಘಟನೆ ರವಿವಾರ ನಡೆದಿದೆ.

ಹೊಡೆದಾಟದಲ್ಲಿ ತೊಡಗಿದ್ದ ಇಬ್ಬರೂ ಶ್ರೀಕೃಷ್ಣ ಮಠದ ಸಿಬ್ಬಂದಿಗಳೆಂದು ಹೇಳಲಾಗಿದೆ. ಇವರ ಮಧ್ಯೆ ಮಾತಿನ ಚಕಮಕಿ ನಡೆದು, ಬಳಿಕ ಇವರು ಹೊಡೆದಾಡಿಕೊಂಡಿದ್ದಾರೆ. ಇವರಲ್ಲಿ ಓರ್ವನಿಗೆ ತಲೆ ಹಾಗೂ ಕಾಲಿಗೆ ಗಾಯ ಗಳಾಗಿದ್ದು, ಆತನನ್ನು ಅಕ್ಕಪಡೆಯ ನೆರವಿನಿಂದ ಸಮಾಜಸೇವಕ ನಿತ್ಯಾನಂದ ಒಳಕಾಡು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor