ಕುಂದಾಪುರ: ಉನ್ನತ ವ್ಯಾಸಂಗಕ್ಕಾಗಿ 10 ಮಂದಿಗೆ ವಿದ್ಯಾರ್ಥಿ ವೇತನ ವಿತರಣೆ
ಕುಂದಾಪುರ, ಜ.21: ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ಕ್ರೀಡೆ, ಧಾರ್ಮಿಕ, ಕಾರ್ಯಗಳಲ್ಲಿ ತೊಡಗಿಸಿ ಕೊಂಡರೆ ದುಶ್ಚಟಗಳಿಂದ ದೂರ ಉಳಿಯಲು ಸಾಧ್ಯ. ಪ್ರತಿಯೊಬ್ಬರು ಪರಸ್ಪರ ಅರಿತು ನಡೆದರೆ ಸಮಾಜದಲ್ಲಿ ಶಾಂತಿ ನೆಲೆಯಾಗುತ್ತದೆ ಎಂದು ನಮ್ಮ ನಾಡ ಒಕ್ಕೂಟ(ಎನ್‌ಎನ್‌ಒ)ದ ಸ್ಥಾಪಕಾಧ್ಯಕ್ಷ ಮುಹಮ್ಮದ್ ಸಲೀಮ್ ಮೂಡಬಿದ್ರೆ ಹೇಳಿದ್ದಾರೆ.
ಕುಂದಾಪುರದ ಎನ್‌ಎನ್‌ಒ ಕಮ್ಯುನಿಟಿ ಸೆಂಟರ್ ಆಶ್ರಯದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ, ಕಾಲೇಜು ಹಾಗು ಉನ್ನತ ವ್ಯಾಸಂಗ ಮಾಡುತ್ತಿರುವ 10 ವಿದ್ಯಾರ್ಥಿಗಳಿಗೆ ಬೈತುಲ್ ಮಾಲ್ ಹಂಗಾರಕಟ್ಟೆ ಇವರ ಸಹಕಾರ ದೊಂದಿಗೆ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಎನ್‌ಎನ್‌ಒ ಕಮ್ಯೂನಿಟಿ ಸೆಂಟರ್ ಕುಂದಾಪುರದ ಅಧ್ಯಕ್ಷ ಅಬ್ದುಲ್ ಮುನಾಫ್ ಹಂಗಾರಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಎನ್‌ಎನ್‌ಒ ಉಡುಪಿ ಜಿಲ್ಲಾಧ್ಯಕ್ಷ ಮುಸ್ತಾಕ್ ಅಹ್ಮದ್ ಬೆಳ್ವೆ, ಉದ್ಯಮಿ ಗಳಾದ ಆದಿಲ್ ಸಾಲಿಗ್ರಾಮ, ಫೈರೋಜ್ ಖಾನ್ ಮೈಸೂರ್, ಉಡುಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಫಾಝಿಲ್ ಆದಿಉಡುಪಿ, ದಾರುಲ್ ಹುದಾ ಚಾರಿಟೇಬಲ್ ಟ್ರಸ್ಟ್ ಪ್ರದಾನ ಕಾರ್ಯದರ್ಶಿ ಡಾ.ನಕ್ವಾ ಪರ್ವೇಜ್ ಅಹ್ಮದ್ ಉಮ್ರಿ ಮದನಿ, ಎನ್‌ಎನ್‌ಒ ಉಡುಪಿ ಘಟಕದ ಜಿಲ್ಲಾ ಖಜಾಂಚಿ ನಕ್ವಾ ಯಾಯ್ಯ, ಬೈತುಲ್ ಮಾಲ್ ಹಂಗಾರಕಟ್ಟೆ ಖಜಾಂಚಿ ಜಾವೇದ್ ಅಕ್ಬರ್, ಜೆಸಿಐ ಕುಂದಾಪುರ ಸಿಟಿ ಅಧ್ಯಕ್ಷ ಯೂಸುಫ್ ಸಲೀಮ್, ಉಡುಪಿ ಘಟಕದ ಉಪಾಧ್ಯಕ್ಷ ರಿಯಾಜ್ ಅಹ್ಮದ್ ಉಡುಪಿ, ಎನ್ ಎನ್ ಒ ಉಡುಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಝಹಿರ್ ಅಹ್ಮದ್ ಗಂಗೊಳ್ಳಿ, ಕುಂದಾಪುರ ಎನ್‌ಎನ್‌ಒ ಘಟಕದ ಅಧ್ಯಕ್ಷ ಎಸ್.ದಸ್ತಗೀರ್, ಉಡುಪಿ ಘಟಕದ ಅಧ್ಯಕ್ಷ ನಝಿರ್ ನೇಜಾರ್, ಕುಂದಾಪುರ ಎನ್‌ಎನ್‌ಒ ಕಮ್ಯುನಿಟಿ ಸೆಂಟರ್ ಉಪಾಧ್ಯಕ್ಷ ಮುಹಮ್ಮದ್ ಗುಲ್ವಾಡಿ, ಮನ್ಸೂರ್ ಇಬ್ರಾಹಿಂ, ಅಬ್ದುಲ್ ಖಾದರ್ ಮೂಡುಗೋಪಾಡಿ, ಸದ್ಯಸ್ಯರಾದ ಅಲ್ತಾಫ್ ಮೂಡುಗೋಪಾಡಿ, ನಾಸೀರ್ ಮೂಡುಗೋಪಾಡಿ, ಖಜಾಂಚಿ ಅನ್ವರ್ ಕಂಡ್ಲೂರ್, ಉಪಾಧ್ಯಕ್ಷ ನಿಹಾರ್ ಅಹ್ಮದ್ ಕುಂದಾಪುರ ಉಪಸ್ಥಿತರಿದ್ದರು.
ಒಕ್ಕೂಟದ ಪ್ರದಾನ ಕಾರ್ಯದರ್ಶಿ ಹುಸೇನ್ ಹೈಕಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಅಬು ಮುಹಮ್ಮದ್ ಸ್ವಾಗತಿಸಿದರು. ನಾಸಿರ್ ಮೂಡುಗೋಪಾಡಿ ವಂದಿಸಿದರು.