×
Ad

ಅಂದರ್‌ ಬಾಹರ್: 11 ಮಂದಿ ಬಂಧನ

Update: 2024-10-14 21:44 IST

ಕಾರ್ಕಳ, ಅ.14: ಕಾರ್ಕಳ ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಎದುರುಗಡೆ ಹೊಸದಾಗಿ ನಿರ್ಮಾಣ ಆಗುತ್ತಿರುವ ಕಟ್ಟಡದ ಹಿಂಬದಿ ಅ.13ರಂದು ಮಧ್ಯಾಹ್ನ ವೇಳೆ ಅಂದರ್-ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ 11 ಮಂದಿಯನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.

ಮೂಡಾರು ಗ್ರಾಮದ ಶ್ರೀನಿವಾಸ(50), ಕುಮಟಾ ಚಂದಾವರ ಗ್ರಾಮ ಮಂಜುನಾಥ(30), ಕಾರ್ಕಳದ ಮುತ್ತಣ್ಣ(21), ಮಂಜುನಾಥ(31), ನಾಗರಾಜ ಉಪ್ಪಾರ(47), ಲಕ್ಷಣ್, ಹೇಮ(60 ), ಯಮನೂರಪ್ಪ(20), ಮಿಯ್ಯಾರು ಗ್ರಾಮದ ಹೇಮನ್, ಆನೆಕೆರೆಯ ಮಲ್ಲಯ್ಯ(20) ಬಂಧಿತ ಆರೋಪಿಗಳು. ಇವರಿಂದ 4950ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News