ವಿದೇಶದಲ್ಲಿ ಉದ್ಯೋಗ ನೀಡುವುದಾಗಿ 12 ಲಕ್ಷ ರೂ. ವಂಚನೆ: ಪ್ರಕರಣ ದಾಖಲು
Update: 2025-07-05 21:21 IST
ಕಾರ್ಕಳ, ಜು.5: ವಿದೇಶದಲ್ಲಿ ಉದ್ಯೋಗ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂ.8ರಂದು ನವೀನ್ ಎಂಬವರು ವಾಟ್ಸಾಪ್‌ಗೆ ಬಂದ ಲಿಂಕ್‌ಗೆ ಕ್ಲಿಕ್ ಮಾಡಿದ್ದು, ಜೂ.9ರಂದು ಸಂದರ್ಶನ ಇದೆ ಎಂಬ ಸಂದೇಶ ಬಂದಿತ್ತು. ಆ ಸಂದೇಶವನ್ನು ಓಪನ್ ಮಾಡಿದಾಗ ಅದರಲ್ಲಿ ತಿಳಿಸಿದಂತೆ ತಮ್ಮ ಹೆಸರು ವಿಳಾಸ ಇತ್ಯಾದಿ ವಿವರಗಳನ್ನು ನಮೂದಿಸಿ, ಅಪರಿಚಿತ ವ್ಯಕ್ತಿಗೆ ಕಳುಹಿಸಿದ್ದರು.
ಅಲ್ಲದೆ ಅಪರಿಚಿತರ ಖಾತೆಗಳಿಗೆ ಜೂ.8ರಿಂದ 25ರತನಕ ಹಂತ ಹಂತವಾಗಿ ಒಟ್ಟು 12,43,426ರೂ. ವನ್ನು ವರ್ಗಾವಣೆ ಮಾಡಿದ್ದು ಅಪರಿಚಿತ ವ್ಯಕ್ತಿಯು ನವೀನ್ ಅವರಿಗೆ ವೀಸಾ ಹಾಗೂ ಕೆಲಸ ಕೊಡಿಸುವು ದಾಗಿ ನಂಬಿಸಿ ಮೋಸ ಮಾಡಿರುವುದಾಗಿ ದೂರಲಾಗಿದೆ.