ಕೋಳಿ ಅಂಕಕ್ಕೆ ದಾಳಿ: 13 ಮಂದಿ ಬಂಧನ
Update: 2024-01-31 20:24 IST
ಮಣಿಪಾಲ, ಜ.31: ಕರಂಬಳ್ಳಿಯಲ್ಲಿ ಜ.30ರಂದು ನಡೆದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಮಣಿಪಾಲ ಪೊಲೀಸರು 13 ಮಂದಿಯನ್ನು ಬಂಧಿಸಿದ್ದಾರೆ.
ಚಂದ್ರಶೇಖರ, ಹರೀಶ್, ಸಚಿನ್, ಯೋಗೀಶ್, ನಾಗೇಶ್, ಪ್ರಕಾಶ್, ಜಯ, ಸುರೇಶ್, ಅನಿಲ್, ನವೀನ್, ಶಾಹಿನ್, ಶಂಕರ, ಈಶ್ವರ ಬಂಧಿತ ಆರೋಪಿಗಳು. ಇವರಿಂದ 21 ಕೋಳಿಗಳು, 2600ರೂ. ನಗದು ಮತ್ತು 2 ಕೋಳಿ ಬಾಳುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.