×
Ad

ಮಲ್ಪೆ: ಹಣ ಹೂಡಿಕೆ ಹೆಸರಿನಲ್ಲಿ 14.30ಲಕ್ಷ ರೂ. ವಂಚನೆ

Update: 2024-02-19 20:45 IST

ಮಲ್ಪೆ: ಹಣ ಹೂಡಿಕೆ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ ಎಸಗಿರುವ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿದ್ರಾತುಲ್ ಮುಂತಾಜಿ(29) ಎಂಬವರಿಗೆ ಡಿ.10ರಂದು ವಾಟ್ಸಾಪ್ ಗ್ರೂಪಿನಲ್ಲಿ ಸ್ಟಾಕ್ ಮಾರ್ಕೇಟಿಂಗ್ ಬಗ್ಗೆ ತಿಳಿಸಿ ಹಂತ ಹಂತವಾಗಿ ಹಣ ಹೂಡಿಕೆ ಮಾಡುವಂತೆ ಪ್ರೇರೆಪಿಸಿದ್ದು, ವೆಬ್‌ಸೈಟ್ ಮೂಲಕ ಐಡಿಯನ್ನು ಕ್ರಿಯೇಟ್ ಮಾಡಿ ಹಣ ಹೂಡಿಕೆ ಮಾಡಲು ತಿಳಿಸಿದಂತೆ ಸಿದ್ರಾತುಲ್ ಜ.10ರಿಂದ ಜ.25ರವರೆಗೆ ಒಟ್ಟು 15,90,000ರೂ. ಹೂಡಿಕೆ ಮಾಡಿದ್ದರು. ಹೂಡಿಕೆ ಮಾಡಿದ ಹಣದಲ್ಲಿ 1,20,000ರೂ. ಹಣವನ್ನು ವಾಪಾಸ್ಸು ತೆಗೆದು ಕೊಂಡಿದ್ದು, ಬಳಿಕ ಹೂಡಿಕೆ ಮಾಡಿದ 14,30,000ರೂ. ಹಣದ ಲಾಭಾಂಶವನ್ನು ಕೊಡದೇ ನಂಬಿಸಿ ಮೋಸ ಮಾಡಿರುವುದಾಗಿ ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News