×
Ad

ಮುಂಬೈ ಲೋಕಮಾನ್ಯ ತಿಲಕ್ ಯಾರ್ಡ್‌ನಲ್ಲಿ ವಿವಿಧ ಕಾಮಗಾರಿ: ಫೆ.18ರವರೆಗೆ ರೈಲುಗಳ ಸಂಚಾರದಲ್ಲಿ ವ್ಯತ್ಯಯ

Update: 2024-02-13 20:41 IST

ಸಾಂದರ್ಭಿಕ ಚಿತ್ರ

ಉಡುಪಿ: ಮುಂಬೈಯ ಲೋಕಮಾನ್ಯ ತಿಲಕ್ ಟರ್ಮಿನಲ್ ಯಾರ್ಡ್‌ನಲ್ಲಿ ವಿವಿಧ ಕಾಮಗಾರಿಗಳು ಪ್ರಾರಂಭಗೊಂಡಿರುವ ಹಿನ್ನೆಲೆಯಲ್ಲಿ ಫೆ.18ರವರೆಗೆ ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ, ಸಂಚಾರದಲ್ಲಿ ಕಡಿತವಾಗಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ರೈಲು ನಂ.12620 ಮಂಗಳೂರು ಸೆಂಟ್ರಲ್-ಲೋಕಮಾನ್ಯ ತಿಲಕ್ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿನ ಫೆ.17ರ (ಶನಿವಾರ) ಸಂಚಾರವನ್ನು ಪನ್ವೇಲ್ ನಿಲ್ದಾಣದಲ್ಲೇ ಕೊನೆಗೊಳಿಸಲಾಗುವುದು. ಅದೇ ರೀತಿ ರೈಲು ನಂ.12619 ಲೋಕಮಾನ್ಯ ತಿಲಕ್-ಮಂಗಳೂರು ಸೆಂಟ್ರಲ್ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲು ಫೆ.18ರ ತನ್ನ ಮರು ಸಂಚಾರವನ್ನು ಮುಂಬೈ ಬದಲು ಪನ್ವೇಲ್ ಸ್ಟೇಶನ್‌ನಿಂದಲೇ ಸಂಜೆ 5:10ಕ್ಕೆ ಪ್ರಾರಂಭಿಸಲಿದೆ.

ಫೆ.16ರಂದು ಪ್ರಯಾಣ ಆರಂಭಿಸುವ ರೈಲು ನಂ.16346 ತಿರುವನಂತಪುರಂ ಸೆಂಟ್ರಲ್- ಲೋಕಮಾನ್ಯ ತಿಲಕ್ ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣ ಪನ್ವೇಲ್ ನಿಲ್ದಾಣದಲ್ಲಿ ಕೊನೆಗೊಳ್ಳಲಿದೆ. 18ರಂದು ಈ ರೈಲಿನ ಮರು ಪ್ರಯಾಣ ಪನ್ವೇಲ್ ನಿಲ್ದಾಣದಿಂದಲೇ ನಿಗದಿತ ಸಮಯ ಅಪರಾಹ್ನ 1:40ಕ್ಕೆ ಪ್ರಾರಂಭಗೊಳ್ಳಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News