×
Ad

ಮಂಗಳೂರು ಎಂಸಿಸಿ ಬ್ಯಾಂಕಿನ 19ನೇ ಬೆಳ್ಮಣ್ ಶಾಖೆ ಉದ್ಘಾಟನೆ

Update: 2025-03-02 18:10 IST

ಬೆಳ್ಮಣ್, ಮಾ.2: ಬೆಳ್ಮಣ್ ಮುಖ್ಯ ರಸ್ತೆಯ ಎಲ್ವಿನ್ ಟವರ್ಸ್‌ನ ನೆಲ ಮಹಡಿಯಲ್ಲಿ ಆರಂಭಿಸಲಾದ ಮಂಗಳೂರಿನ ಕೆಥೋಲಿಕ್ ಕೋ ಆಪರೇಟಿವ್ (ಎಂಸಿಸಿ) ಬ್ಯಾಂಕಿನ 19ನೇ ಬೆಳ್ಮಣ್ ಶಾಖೆಯನ್ನು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ರವಿವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಬ್ಯಾಂಕು ಸಹಿತ ಯಾವುದೇ ವ್ಯಕಿತಿಘಿ, ಸಂಸ್ಥೆಯ ವ್ಯವಹಾರ ಪ್ರಾಮಾಣಿಕ, ಶಿಸ್ತು ಬದ್ಧವಾಗಿದ್ದರಷ್ಟೇ ಸಾಧನೆ ಸಾಧ್ಯವಿದ್ದು ನಾನಾ ಯೋಜನೆಗಳ ಜಾರಿಗೆ ಸರಕಾರ ಹಾಗೂ ರೈತರು, ಉದ್ಯಮಗಳ ನಡುವೆ ಬ್ಯಾಂಕುಗಳೇ ಪ್ರಗತಿಯ ಕೊಂಡಿ ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದ್ದಾರೆ.

ವಿಶ್ವಾಸವೇ ಬ್ಯಾಂಕುಗಳ ತಳಪಾಯ. ಖಾಸಗಿ, ರಾಷ್ಟ್ರೀಕೃತ ಬ್ಯಾಂಕುಗಳಿಗೆ ಹೋಲಿಸಿದರೆ ಎಂಸಿಸಿ ಬ್ಯಾಂಕು ಕಳೆ ದೊಂದು ದಶಕದಲ್ಲಿ ವೇಗದ ಪ್ರಗತಿ ದಾಖಲಿಸಿದೆ. ಪ್ರತಿಯೊಬ್ಬರಲ್ಲಿರುವ ಪ್ರಗತಿ, ವ್ಯವಹಾರ, ಸಾಧನೆಯ ಕನಸು ಸಾಕಾರಗೊಳಿಸಲು ಬ್ಯಾಂಕುಗಳು ನೆರವಾಗಬೇಕು. ರಾಜ್ಯದಲ್ಲಿ ಸಹಕಾರ ಕಾಯಿದೆಯು ಸೇವಾ ವಿಸತಿರಣೆಗೆ ಹೆಚ್ಚಿನ ಅವಕಾಶ ಕಲ್ಪಿಸಿದೆ ಎಂದು ನುಡಿದರು.

ಬೆಳ್ಮಣ್ ಸಂತ ಜೋಸೆಫರ ಚರ್ಚ್‌ನ ಧರ್ಮಗುರು ವಂ.ಫಾ.ಫ್ರೆಡ್ರಿಕ್ ಮಸ್ಕರೇನ್ಹಸ್ ಆಶೀರ್ವಚನ ನೀಡಿ, ಗ್ರಾಹಕರಿಗೆ ಒಳ್ಳೆಯ ಸೇವೆ ದೊರಕಿದ ಪರಿಣಾಮ ಬ್ಯಾಂಕ್ ಬೆಳೆಯುತತಿದೆ. ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಿದಾಗ ದೇವರ ಆಶೀರ್ವಾದವೂ ಲಭಿಸಿ ಸಂಸ್ಥೆಯ ಉನ್ನತಿಯಾಗುತ್ತದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೋ ಮಾತನಾಡಿ, ಬ್ರಹ್ಮಾವರ ಖಾಖೆ ಒಂದು ವರ್ಷದಲ್ಲಿ 10ಕೋಟಿ ರೂ. ವ್ಯವಹಾರ ನಡೆಸಿದೆ. ಬೆಳ್ಮಣ್ಣು ಶಾಖೆ ಮೂಲಕ ಒಂದು ವರ್ಷದಲ್ಲಿ 10ಕೋಟಿ ರೂ. ವ್ಯವಹಾರದ ಗುರಿಯಿದ್ದು ಮುಂದಿನ ವರ್ಷ ಇದೇ ಸಮಯಕ್ಕೆ ಸಾಧನೆ ಯನ್ನು ಸಂಭ್ರಮಿಸಲಾಗುವುದು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ದಾಯ್ಜಿ ವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ವಾಲ್ಟರ್ ನಂದಳಿಕೆ ಮಾತನಾಡಿ ದರು. ಭದ್ರತಾ ಕೊಠಡಿ, ಇ ಸ್ಟ್ಯಾಂಪ್ ವ್ಯವಸ್ಥೆ ಉದ್ಘಾಟಿಸಲಾಯಿತು. ಹ್ಯುಮ್ಯಾನಿಟಿ ಎನ್‌ಜಿಒ ಸಹಿತ ಅಗತ್ಯವುಳ್ಳವರಿಗೆ ದತ್ತಿ ನೆರವು ನೀಡಲಾಯಿತು ಪ್ರತಿಭಾವಂತರು, ಸಾಧಕರಾದ ಮಾ.ಉದ್ಭವ್ ಜಿ.ದೇವಾಡಿಗ, ಅಕ್ಷತಾ ಪೂಜಾರಿ ಬೋಳ, ಜಿತೇಂದ್ರ ಫುರ್ಟಾಡೊ, ರೆಮೆಡಿಯಾ ಡಿಸೋಜ ಇವರನ್ನು ಸನ್ಮಾನಿಸಲಾಯಿತು. ಗ್ರಾಹಕರನ್ನು ಗೌರವಿಸಲಾಯಿತು.

ಎಂಸಿಸಿ ಬ್ಯಾಂಕಿನ ಮಹಾಪ್ರಬಂಧಕ ಸುನಿಲ್ ಮಿನೇಜಸ್, ಬೆಳ್ಮಣ್ ಗ್ರಾಪಂ. ಅಧ್ಯಕ್ಷೆ ರಾಮೇಶ್ವರಿ ಎಂ. ಶೆಟ್ಟಿ, ಅನಿವಾಸಿ ಉದ್ಯಮಿ ರೋನ್ ರೊಡ್ರಿಗಸ್ ಲಂಡನ್, ಬ್ಯಾಂಕಿನ ಚುನಾಯಿತ ನಿರ್ದೇಶಕರಾದ ಜೋಸೆಫ್ ಎ. ಪತ್ರಾವೋ, ಡಾ.ಜೆರಾಲ್ಡ್ ಪಿಂಟೊ, ಡೇವಿಡ್ ಡಿಸೋಜ, ಎಲ್‌ರಾಯ್ ಎ.ಕ್ರಾಸ್ಟೊ, ಜೆ.ಪಿ.ರೊಡ್ರಿಗಸ್, ಹೆರಾಲ್ಡ್ ಮೊಂತೇರೊ, ರೋಶನ್ ಡಿಸೋಜ, ಡಾ.ಫ್ರೀಡಾ ಡಿಸೋಜ, ನಾಮನಿರ್ದೇಶಿತ ವೃತ್ತಿಪರ ನಿರ್ದೇಶಕರಾದ ಮೆಲ್ವಿನ್ ವಾಸ್, ವಿನ್ಸೆಂಟ್ ಲಸ್ರಾದೊ, ಸಿ.ಜಿ.ಪಿಂಟೊ, ಸುಶಾಂತ್ ಸಲ್ದಾನಾ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶರ್ಮಿಳಾ ಮಿನೇಜಸ್, ಫೆಲಿಕ್ಸ್ ಡಿಕ್ರೂಸ್, ಆಲ್ವಿನ್ ಪಿ.ಮೊಂತೇರೋ ಉಪಸ್ಥಿತರಿದ್ದರು.

ಎಂಸಿಸಿ ಬ್ಯಾಂಕಿನ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ ಸ್ವಾಗತಿಸಿದರು. ಎಲ್ಸನ್ ಹಿರ್ಗಾನ್ ಕಾರ್ಯಕ್ರಮ ನಿರೂಪಿಸಿದರು. ಎಂಸಿಸಿ ಬ್ಯಾಂಕಿನ ಬೆಳ್ಮಣ್ ಶಾಖಾ ವ್ಯವಸ್ಥಾಪ ಶೈನಿ ಲಸ್ರಾದೊ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News