×
Ad

ಕಾಪು: ಸೈಬರ್ ವಂಚಕರಿಂದ ಫಿಶ್‌ಮಿಲ್‌ಗೆ 2 ಲಕ್ಷ ಡಾಲರ್ ವಂಚನೆ; ಪ್ರಕರಣ ದಾಖಲು

Update: 2025-02-28 21:05 IST

ಕಾಪು, ಫೆ.28: ಉದ್ಯಾವರದ ಪಿತ್ರೋಡಿಯಲ್ಲಿರುವ ಫಿಶ್‌ಮಿಲ್ ಆಯಿಲ್ ಕಂಪನಿಗೆ ಯಂತ್ರೋಪಕರಣಗಳ ಖರೀದಿಗೆ ಸಂಬಂಧಿಸಿ ಸೈಬರ್ ವಂಚಕರು ನಕಲಿ ಇಮೇಲ್ ಕಳುಹಿಸಿ ಕೋಟ್ಯಂತರ ರೂ. ವಂಚಿಸಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಶಸ್ವಿ ಫಿಶ್‌ಮಿಲ್‌ನಿಂದ ಮಂಗಳೂರಿನ ವಿಶೇಷ ಆರ್ಥಿಕ ವಲಯದಲ್ಲಿ ಆರಂಭಿಸಿರುವ ಸುರಮಿ ಘಟಕಕ್ಕೆ ಬೇಕಾಗುವ 15,00,000 ಡಾಲರಿನ ಯಂತ್ರೋಪಕರಣಗಳನ್ನು ಹಾಂಗ್‌ಕಾಂಗ್ ಮೂಲದ ವಿತರಿಕನಿಂದ ಖರೀದಿ ಮಾಡುವ ಕುರಿತು 2024ರಲ್ಲಿ ಈ-ಮೇಲ್ ಮುಖಾಂತರ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. ಡಿ.29ರಂದು ಫಿಶ್‌ಮೀಲ್ ಕಂಪನಿಗೆ ಫೇಕ್ ಈ- ಮೇಲ್ ಐಡಿಯಿಂದ ಸಂದೇಶ ಬಂದಿದ್ದು, ಒಪ್ಪಂದದಂತೆ ಹಣವನ್ನು ಬೇರೆ ಖಾತೆಗೆ ಹಣವನ್ನು ವರ್ಗಾವಣೆ ಮಾಡುವಂತೆ ತಿಳಿಸಲಾಗಿತ್ತು.

ಅದರಂತೆ ಫಿಶ್‌ಮಿಲ್ ಕಂಪೆನಿಯವರು ಜ.23ರಂದು 2,00,000 ಡಾಲರ್ ಹಣವನ್ನು ಆ ಖಾತೆಗೆ ವರ್ಗಾಯಿಸಿದ್ದರು. ಬಳಿಕ ಈ ಬಗ್ಗೆ ಪರಿಶೀಲಿಸಿದಾಗ ಸೈಬರ್ ವಂಚಕರು ಫಿಶ್ ಮಿಲ್ ಕಂಪನಿಯ ಹಾಗೂ ಹಾಂಗ್‌ಕಾಂತ್‌ನ ವಿತರಿಕ ಕಂಪನಿಯ ಈ-ಮೇಲ್ ಐಡಿಗಳನ್ನು ಹ್ಯಾಕ್ ಮಾಡಿ ಫೇಕ್ ಈ-ಮೇಲ್ ಐಡಿ ಮೂಲಕ ಸಂಪರ್ಕ ಸಾಧಿಸಿ 2,00,000 ಡಾಲರ್ ಹಣವನ್ನು ಹಾಕಿಸಿಕೊಂಡು ಮೋಸ ಮಾಡಿರುವುದಾಗಿ ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News