×
Ad

ಪ್ರತ್ಯೇಕ ಪ್ರಕರಣ: 2 ದ್ವಿಚಕ್ರ ವಾಹನ ಕಳವು

Update: 2025-03-02 20:41 IST

ಬೈಂದೂರು, ಮಾ.2: ನಾವುಂದ ಗ್ರಾಮದ ಕೊಯನಗರ ಮುಲ್ಲಾ ಎಂಬಲ್ಲಿರುವ ಮನೆ ಅಂಗಳದಲ್ಲಿ ಫೆ.28ರಂದು ರಾತ್ರಿ ಸಮೀರ್ ಎಂಬವರು ನಿಲ್ಲಿಸಿದ್ದ 70,000ರೂ. ಮೌಲ್ಯದ ಕಪ್ಪು ಬಣ್ಣದ ಕೆಎ-42-ಡಬ್ಲ್ಯು-3899 ನೇ ನಂಬರಿನ ರಾಯಲ್ ಎನ್ ಫೀಲ್ಡ್ ಬುಲೆಟ್ ಕಳವಾಗಿರುವ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ: ಕುಂದಾಪುರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರಿನ ಮಹಾಲಕ್ಷ್ಮೀ ಹೋಟಲ್ ಬಳಿ ಹೇರೂರು ಗ್ರಾಮ ಪ್ರದೀಪ್ ಎಂಬವರು ಮಾ.1ರಂದು ರಾತ್ರಿ ನಿಲ್ಲಿಸಿದ್ದ 65ಸಾವಿರ ರೂ. ಮೌಲ್ಯದ ಕೆಎ-20- ಎಚ್‌ಎ-7708 ನಂಬರಿನ ಹೊಂಡ ಡಿಯೋ ಸ್ಕೂಟರ್ ಕಳವಾಗಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News