×
Ad

ಹಾಡಿಯಲ್ಲಿ ಮಾನವ ಮೂಳೆಗಳು ಪತ್ತೆ: ಪ್ರಕರಣ ದಾಖಲು

Update: 2025-09-15 21:35 IST

ಕೊಲ್ಲೂರು, ಸೆ.15: ಹೊಸೂರು ಗ್ರಾಮದ ಜಡ್ಕಲ್ ಏರ್ ಎಂಬಲ್ಲಿಯ ಬೆಳೆಕೋಡ್ಲು ರಸ್ತೆಯ ಹತ್ತಿರ ಸರಕಾರಿ ಹಾಡಿಯಲ್ಲಿ ಮಾನವ ಮೂಳೆಗಳು ಸೆ.14ರಂದು ಮಧ್ಯಾಹ್ನ ವೇಳೆ ಪತ್ತೆಯಾಗಿವೆ.

ಸ್ಥಳದಲ್ಲಿ ಮೂಳೆಯ ತುಂಡುಗಳ ಜೊತೆ ಒಂದು ಪ್ಯಾಂಟ್, ಶರ್ಟ್, ಒಂದು ಕೀ ಪ್ಯಾಡ್ ಮೊಬೈಲ್, ಒಂದು ಜೊತೆ ಚಪ್ಪಲಿ ಸಿಕ್ಕಿದೆ. ಅಲ್ಲೇ ಹತ್ತಿರದ ಮರದಲ್ಲಿ ನೈಲಾನ್ ಹಗ್ಗ ತುಂಡಾಗಿರುವುದು ಕಂಡುಬಂದಿದೆ.

ಯಾರೋ ವ್ಯಕ್ತಿ ಸುಮಾರು 2-3 ತಿಂಗಳು ಹಿಂದೆ ಈ ಕಾಡಿಗೆ ಬಂದು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದು, ನಂತರ ಹಗ್ಗ ಕಟ್ಟಾಗಿ ಮೃತ ಶರೀರ ಬಿದ್ದಾಗ ಕಾಡು ಪ್ರಾಣಿಗಳು ತಿಂದು ಹಾಕಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News