ಉಡುಪಿ ಎಸ್‌ಡಿಎಂ ಆಯುರ್ವೇದ ಕಾಲೇಜಿಗೆ ಒಟ್ಟು 22 ರ‍್ಯಾಂಕ್ ಗಳು
ಪಲ್ಲವಿ, ಶ್ರೀಕುಟ್ಟಿ, ಸಂತೋಷಿಣಿ
ಉಡುಪಿ, ಫೆ.27: 2023-24ರ ಶೈಕ್ಷಣಿಕ ವರ್ಷದಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಬೆಂಗಳೂರು ನಡೆಸಿದ ಸ್ನಾತಕೋತತಿರ ವಿಭಾಗದ ಅಂತಿಮ ಪರೀಕ್ಷೆಯಲ್ಲಿ ಉಡುಪಿ ಎಸ್‌ಡಿಎಂ ಆಯುರ್ವೇದ ಕಾಲೇಜಿಗೆ ಎರಡು ಪ್ರಥಮ ಸೇರಿದಂತೆ ಒಟ್ಟು 22 ರ‍್ಯಾಂಕ್ ಗಳು ದೊರೆತಿವೆ.
ರೋಗನಿಧಾನ ವಿಭಾಗದಿಂದ ಡಾ.ಪಲ್ಲವಿ ಗಣೇಶ್ ಪೂಜಾರಿ, ಅಗದ ತಂತ್ರ ವಿಭಾಗದಿಂದ ಡಾ.ಶ್ರೀಕುಟ್ಟಿ ಪಿ.ವಿ., ಮಾನಸರೋಗ ವಿಭಾಗದಿಂದ ಡಾ.ಆರ್. ಸಂತೋಷಿಣಿ ಒಂದನೇ ರ್ಯಾಂಕ್ ಪಡೆದಿದ್ದಾರೆ. ಅಗದತಂತ್ರ ವಿಭಾಗದಿಂದ ಡಾ.ಹರಿತ ಎಂ., ಮಾನಸ ರೋಗ ವಿಭಾಗದಿಂದ ಡಾ.ಪಾಟ ಅನುಷ, ಸ್ವಸ್ಥವೃಕ್ತ ವಿಭಾಗದಿಂದ ಡಾ.ವಿಜಯಲಕ್ಷ್ಮೀ ಎಸ್. ಕಾಮತಾರ್ 2ನೇ ರ‍್ಯಾಂಕ್ ಗಳಿಸಿದ್ದಾರೆ.
ರೋಗನಿದಾನ ವಿಭಾಗದಿಂದ ಡಾ.ದೀಕ್ಷಾ ಡಿ.ಶೆಟ್ಟಿ, ಮಾನಸ ರೋಗ ವಿಭಾಗದಿಂದ ಡಾ.ತೇಜಸ್ವಿನಿ 3ನೇ ರ‍್ಯಾಂಕ್, ದ್ರವ್ಯಗುಣ ವಿಭಾಗದಿಂದ ಡಾ. ಶ್ರದ್ಧಾ ಜಿ.ಎಸ್., ಕಾಯಚಿಕಿತ್ಸಾ ವಿಭಾಗದಿಂದ ಡಾ.ದಿಲೀಪ್ ಪಿ., ರಚನಾ ಶರೀರ ವಿಭಾಗದಿಂದ ಡಾ.ಮಾಧುರಿ ಆಚಾರ್ಯ 4ನೆ ರ‍್ಯಾಂಕ್, ಅಗದ ತಂತ್ರ ವಿಭಾಗದಿಂದ ಡಾ.ತೇಜಸ್ವಿನಿ ರಜನಾಲ್, ಕೌಮಾರಭೃತ್ಯ ವಿಭಾಗದಿಂದ ಡಾ. ಪೂಜಾ ಭಟ್ 5ನೇ ರ್ಯಾಂಕ್, ಪ್ರಸೂತಿ ತಂತ್ರ ಮತ್ತು ಸ್ತ್ರೀರೋಗ ವಿಭಾಗದಿಂದ ಡಾ.ಕಾವ್ಯ ಬಿ.ಎನ್., ರಸಶಾಸ್ತ್ರ ಮತ್ತು ಭೈಷ್ಯಜ್ಯ ಕಲ್ಪನ ವಿಭಾಗದಿಂದ ಡಾ. ಐಶ್ವರ್ಯ ಸಿ.ಅಂಚನ್ 6ನೇ ರ‍್ಯಾಂಕ್, ಅಗದತಂತ್ರ ವಿಭಾಗದಿಂದ ಡಾ.ನೇಹಾ ಮೋಹನ್ ರೊಖಡೆ, ದ್ರವ್ಯಗುಣ ವಿಭಾಗದಿಂದ ಡಾ.ಲೇಕ್ಷ್ಮಿಎಮ್.ಎಸ್. 7ನೇ ರ‍್ಯಾಂಕ್, ಮಾನಸರೋಗ ವಿಭಾಗದಿಂದ ಡಾ.ಅನ್ಶ ಮನೋಹರನ್ 8ನೇ ರ‍್ಯಾಂಕ್, ಕಾಯಚಿಕಿತ್ಸಾ ವಿಭಾಗದಿಂದ ಡಾ.ಸೌಮಾಶ್ರೀ ವಿ.ಆರ್., ಆಯು ರ್ವೇದ ಸಂಹಿತಾ ಸಿದ್ಧಾಂತ ವಿಭಾಗದಿಂದ ಡಾ.ರಂಜು ಷಾ 9ನೇ ರ್ಯಾಂಕ್, ಪ್ರಸೂತಿ ತಂತ್ರ ಮತ್ತು ಸ್ತ್ರೀರೋಗ ವಿಭಾಗದಿಂದ ಡಾ.ನಯನ ಎನ್., ಕೌಮಾರ ಭೃತ್ಯ ವಿಭಾಗದಿಂದ ಡಾ.ಅಂಜು ಜಿ.ಕೆ. 10ನೇ ರ‍್ಯಾಂಕ್ ಗಳಿಸಿದ್ದಾರೆ.
ಪರೀಕ್ಷೆಗೆ ಹಾಜರಾದ 55 ವಿದ್ಯಾರ್ಥಿಗಳಲ್ಲಿ ಒಟ್ಟು 22 ರ್ಯಾಂಕ್‌ಗಳನ್ನು ಪಡೆಯುವ ಮೂಲಕ ಪ್ರಶಂಶನೀಯ ಸಾಧನೆಯನ್ನು ಮಾಡಿದ್ದಾರೆ.
ಬಿಎಎಂಎಸ್: ಡಾ.ಪ್ರಜ್ಞಾಗೆ ಪ್ರಥಮ ರ‍್ಯಾಂಕ್
2023-24ರ ಶೈಕ್ಷಣಿಕ ವರ್ಷದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಬೆಂಗಳೂರು ನಡೆಸಿದ ರಾಜ್ಯದ ಸಮಗ್ರ ಆಯುರ್ವೇದ ವಿದ್ಯಾರ್ಥಿಗಳ ಬಿಎಎಂಎಸ್ ಸ್ನಾತಕ ವಾರ್ಷಿಕ ಪರೀಕ್ಷೇಯಲ್ಲಿ ಉಡುಪಿ ಎಸ್‌ಡಿಎಂ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳು 3 ರ‍್ಯಾಂಕ್ ಗಳಿಸಿದ್ದಾರೆ.
ಡಾ.ಪ್ರಜ್ಞಾ ಎನ್. ಪ್ರಥಮ ರ‍್ಯಾಂಕ್ ಪಡೆದು 4 ಚಿನ್ನದ ಪದಕ ಹಾಗೂ 2 ನಗದು ಬಹುಮಾನವನ್ನು ಗಳಿಸಿದ್ದಾರೆ. ಅದೇ ರೀತಿ ಡಾ.ಚೈತ್ರ ತಿಮ್ಮಣ್ಣ ಹೆಗ್ಡೆ, 6ನೇ ರ‍್ಯಾಂಕ್, ಡಾ.ಅಂಬಿಕ 10ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.