ಹೂಡೆ: ಫೆ.24ರಂದು ಧಾರ್ಮಿಕ ಪ್ರವಚನ ಕಾರ್ಯಕ್ರಮ
Update: 2024-02-22 17:53 IST
ಉಡುಪಿ: ಮದ್ರಸಾ ಉಬೈ ಬಿನ್ ಕಾಬ್ ಹೂಡೆ ವತಿಯಿಂದ ಜಮೀಯತ್ ಅಹ್ಲೆ ಹದೀಸ್ ಉಡುಪಿ ಜಿಲ್ಲೆ ಅಧೀನದಲ್ಲಿ ಪ್ರವಚನ ಕಾರ್ಯಕ್ರಮ ಫೆ.24ರಂದು ರಾತ್ರಿ 8.45ಗಂಟೆಯಿಂದ 10.30ರವರೆಗೆ ಹೂಡೆಯ ಜದೀದ್ ಜುಮ್ಮಾ ಮಸೀದಿಯಲ್ಲಿ ನಡೆಯಲಿದೆ.
‘ಬಚ್ಚೊ ಕೆ ಬಿಗಡನೆ ಕೆ ಅಸ್ಬಾಬ್ ಔರ್ ಉಸ್ಕಾ ಹಲ್’ ಎಂಬ ವಿಷಯದ ಕುರಿತು ಇಸ್ಲಾಮಿನ ಪ್ರಸಿದ್ಧ ವಾಗ್ಮಿ ಶೇಕ್ ಹಾಫೀಝ್ ಅಬ್ದುಲ್ ಕದೀರ್ ಉಮ್ರಿ (ಬೆಂಗಳೂರು) ಪ್ರವಚನ ನೀಡಲಿರುವರು. ಮುಖ್ಯ ಅತಿಥಿಯಾಗಿ ಜಮೀಯತ್ ಅಹ್ಲೆ ಹದೀಸ್ ಉಡುಪಿ ಜಿಲ್ಲಾಧ್ಯಕ್ಷ ಅತೀಫ್ ಹುಸೈನ್ ಭಾಗವಹಿಸಿರುವರು. ಈ ಸಂದರ್ಭ ಈ ವರ್ಷ ಕುರ್‌ಆನ್ ಹಿಫ್ಝ್ ಮಾಡಿದ ಇಬ್ಬರು ಹಾಗೂ ಇತರ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.