×
Ad

ವಕೀಲರ ರಾಜ್ಯ ಮಟ್ಟದ ವಿವಿಧ ಪಂದ್ಯಾವಳಿ: ಫೆ.24ರಂದು ಟ್ರೋಫಿಗಳ ಅನಾವರಣ

Update: 2025-02-22 20:38 IST

ಉಡುಪಿ, ಫೆ.22: ಉಡುಪಿ ನ್ಯಾಯಾಲಯ ಮತ್ತು ವಕೀಲರ ಸಂಘದ ಶತಮಾನೋತ್ತರ ಬೆಳ್ಳಿಹಬ್ಬ (125ನೇ ವಾರ್ಷಿಕೋತ್ಸವ) ಅಂಗವಾಗಿ ವಕೀಲರ ಸಂಘದ ಆಶ್ರಯದಲ್ಲಿ ವಕೀಲರಿಗಾಗಿ ರಾಜ್ಯಮಟ್ಟದ ಹೊನಲು ಬೆಳಕಿನ ಕ್ರಿಕೆಟ್, ವಾಲಿಬಾಲ್, ತ್ರೋಬಾಲ್ ಹಾಗೂ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗಳು ಮಾ.1 ಹಾಗೂ 2ರಂದು ನಡೆಯಲಿದೆ.

ಈ ಪ್ರಯುಕ್ತ ವಿವಿಧ ಪಂದ್ಯಾವಳಿಗಳ ಟ್ರೋಫಿಗಳ ಅನಾವರಣ ಫೆ.24ರ ಸೋಮವಾರ ಸಂಜೆ 4:30ಕ್ಕೆ ಉಡುಪಿ ನ್ಯಾಯಾ ಲಯ ಸಂಕೀರ್ಣದ 3ನೇ ಮಹಡಿಯಲ್ಲಿರುವ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆಯಲಿದೆ. ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್.ಗಂಗಣ್ಣವರ್ ಟ್ರೋಫಿಗಳ ಅನಾವರಣ ಮಾಡಲಿದ್ದಾರೆ ಎಂದು ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್‌ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News