ಬೆಳಗಾವಿಗೆ ಹೋದ ವ್ಯಕ್ತಿ 26 ವರ್ಷಗಳಿಂದ ನಾಪತ್ತೆ
Update: 2025-01-18 17:33 IST
ಬ್ರಹ್ಮಾವರ: 26 ವರ್ಷಗಳ ಹಿಂದೆ ಕೆಲಸಕ್ಕೆಂದು ಬೆಳಗಾವಿಗೆ ಹೋದ ವ್ಯಕ್ತಿಯೊಬ್ಬರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾದವರನ್ನು ಚೇರ್ಕಾಡಿ ಗ್ರಾಮದ ಶ್ರೀನಿವಾಸ ಯಾನೆ ಶೀನ(71) ಎಂದು ಗುರುತಿಸಲಾಗಿದೆ. ಇವರು ತನ್ನ 44ನೇ ವರ್ಷ ಪ್ರಾಯದಲ್ಲಿ 1998ರಲ್ಲಿ ಬೆಳಗಾವಿಗೆ ಕೆಲಸಕ್ಕೆ ಹೋದವರು ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಇವರನ್ನು ಎಲ್ಲ ಕಡೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.