ಮಂಗಳೂರು ಜಂಕ್ಷನ್- ಉದ್ನಾ ಜಂಕ್ಷನ್ ರೈಲಿನ ಸಂಚಾರ 3 ತಿಂಗಳಿಗೆ ವಿಸ್ತರಣೆ
Update: 2025-07-01 20:12 IST
ಉಡುಪಿ, ಜು.1: ಮಂಗಳೂರು ಜಂಕ್ಷನ್ ಹಾಗೂ ಉದ್ನಾ ಜಂಕ್ಷನ್ ನಡುವೆ ಕೊಂಕಣ ರೈಲು ಮಾರ್ಗದಲ್ಲಿ ವಾರಕ್ಕೆರಡು ಬಾರಿ ಸಂಚರಿಸುವ ಎಕ್ಸ್‌ಪ್ರೆಸ್ ರೈಲಿನ ಅವಧಿಯನ್ನು ಇನ್ನೂ ಮೂರು ತಿಂಗಳಿಗೆ ವಿಸ್ತರಿಸ ಲಾಗಿದೆ. ಇದೀಗ ರೈಲಿನ ಸಂಚಾರವನ್ನು ಸೆಪ್ಟಂಬರ್ 29ರವರೆಗೆ ಮುಂದುವರಿಸಲಾಗುವುದು ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಉದ್ನಾ ಜಂಕ್ಷನ್ ಹಾಗೂ ಮಂಗಳೂರು ಜಂಕ್ಷನ್ ನಡುವೆ ಪ್ರತಿ ಬುಧವಾರ ಹಾಗೂ ರವಿವಾರ ಸಂಚರಿ ಸುವ ಎಕ್ಸ್‌ಪ್ರೆಸ್ ವಿಶೇಷ ರೈಲಿನ ಸಂಚಾರ ಇದೀಗ ಜು.2ರಿಂದ ಸೆ.28ರವರೆಗೆ ವಿಸ್ತರಿಸಲಾಗಿದೆ.
ಅದೇ ರೀತಿ ಪ್ರತಿ ಗುರುವಾರ ಹಾಗೂ ಸೋಮವಾರದಂದು ಮಂಗಳೂರಿನಿಂದ ಹೊರಡುವ ಮಂಗಳೂರು ಜಂಕ್ಷನ್- ಉದ್ನಾ ಜಂಕ್ಷನ್ ರೈಲಿನ ಸಂಚಾರವನ್ನು ಜು.3ರಿಂದ ಸೆ.29ರವರೆಗೆ ವಿಸ್ತರಿಸಿ ಆದೇಶ ಹೊರಡಿ ಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.