×
Ad

ಹೇರೂರು ಪರಿಸರದಲ್ಲಿ 32 ಪ್ರಬೇಧದ ಹಕ್ಕಿಗಳ ವೀಕ್ಷಣೆ

Update: 2025-10-26 18:51 IST

ಉಡುಪಿ, ಅ.26: ಉಡುಪಿಗೆ ಬನ್ನಿ ತಂಡದ ನೇತೃತ್ವದಲ್ಲಿ ಉಡುಪಿ ಸಮೀಪದ ಹೇರೂರಿನಲ್ಲಿ ಶನಿವಾರ ಸಂಜೆ ಹಕ್ಕಿ ವೀಕ್ಷಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಪರಿಸರ ಆಸಕ್ತರು ಸುಮಾರು ಒಂದು ಗಂಟೆಗಳ ಕಾಲ ಹೇರೂರು ಸುತ್ತಮುತ್ತಲಿನ ಪರಿಸರದಲ್ಲಿ ಕಾಲ್ನಡಿಗೆಯ ಮೂಲಕ ತೆರಳಿ 32 ಪ್ರಬೇಧಗಳ 65 ಹಕ್ಕಿಗಳನ್ನು ಪಟ್ಟಿ ಮಾಡಿದರು. ಏಷಿಯನ್ ಪಾಮ್ ಸ್ವಿಫ್ಟ್, ರೆಡ್ ವ್ಯಾಟ್ಲಡ್ ಲ್ಯಾಪ್ವಿಂಗ್, ಏಷಿಯನ್ ಓಪನ್ ಬಿಲ್, ಪ್ಲಮ್ ಹೆಡೆಡ್ ಪ್ಯಾರಾಕೀಟ್, ವರ್ನಲ್ ಹ್ಯಾಂಗಿಂಗ್ ಪ್ಯಾರಟ್, ಬ್ಲಾಕ್ ಹೂಡೆಡ್ ಓರಿಯೋಲ್, ಇಂಡಿಯನ್ ಪ್ಯಾರಾಡೈಸ್ ಫ್ಲೈ ಕ್ಯಾಚರ್, ಗೋಲ್ಡನ್ ಫ್ರಾಂಟೆಡ್ ಲೀಫ್ ಬರ್ಡ್ ಸೇರಿದಂತೆ 32 ಪ್ರಬೇಧಗಳ ಹಕ್ಕಿಗಳನ್ನು ವೀಕ್ಷಿಸಲಾಯಿತು.

ಕಾರ್ಯಕ್ರಮದ ಕುರಿತು ಮಾತನಾಡಿದ ಉಡುಪಿಗೆ ಬನ್ನಿ ತಂಡದ ಸದಸ್ಯ ಡಾ.ಗಣೇಶ್ ಪ್ರಸಾದ್ ಜಿ.ನಾಯಕ್, ಹಕ್ಕಿ ವೀಕ್ಷಣೆಯಿಂದ ಮಾನಸಿಕ ನೆಮ್ಮದಿಯ ಜತೆಗೆ ನಮ್ಮಲ್ಲಿ ನಿಸರ್ಗದ ಜತೆ ಉತ್ತಮ ಬಾಂಧವ್ಯ ಸ್ಥಾಪಿಸಲು ಸಾಧ್ಯವಾಗುತ್ತದೆ. ಹಕ್ಕಿ ವೀಕ್ಷಣೆ ಹವ್ಯಾಸದಿಂದ ಒತ್ತಡ ನಿರ್ವಹಣೆಯ ಜತೆಗೆ ಅನೇಕ ಕುತೂಹಲಕಾರಿ ಅಂಶಗಳನ್ನು ಅರ್ಥೈಸಿಕೊಳ್ಳಲು ಉತ್ತಮ ಅವಕಾಶ ಸಿಗುತ್ತದೆ. ಹಕ್ಕಿ ವೀಕ್ಷಣೆಯಿಂದ ಸುಸ್ಥಿರ ಪ್ರವಾಸೋದ್ಯಮಕ್ಕೆ ಉತ್ತೇಜನ ಸಾಧ್ಯ ಎಂದು ತಿಳಿಸಿದರು.

ಕುಂದಾಪುರದ ಸುಮಂತ್, ಹಕ್ಕಿಗಳ ಸ್ವಭಾವ, ಆಹಾರ ಕ್ರಮ ಹಾಗೂ ಗುಣಲಕ್ಷಣಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಗಿರೀಶ್ ಆಚಾರ್ಯ, ಶ್ರೀಕಾಂತ್ ಪೂಜಾರಿ, ಪ್ರದೀಪ್ ನಾಯಕ್, ಉಲ್ಲಾಸ್ ಶೆಣೈ, ಪ್ರತಿಮಾ ಆಚಾರ್ಯ, ಕೆ. ಉದಯ ಕುಮಾರ್, ಕೆ.ಸ್ವಾತಿ, ಮೇಧಾ ನಾಯಕ್, ಸ್ವಾತಿ, ತನ್ವಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News