ಹಿರಿಯಡ್ಕ: ಟಾಸ್ಕ್ ಹೆಸರಿನಲ್ಲಿ 3.60ಲಕ್ಷ ರೂ. ಆನ್‌ಲೈನ್ ವಂಚನೆ; ಪ್ರಕರಣ ದಾಖಲು
Update: 2025-07-11 22:20 IST
ಹಿರಿಯಡ್ಕ, ಜು.11: ಟಾಸ್ಕ್ ಹೆಸರಿನಲ್ಲಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೆರ್ಡೂರು ಗ್ರಾಮದ ಶ್ವೇತಾ ಡಿ.(26) ಎಂಬವರಿಗೆ ಜು.6ರಂದು ಮೊಬೈಲ್‌ಗೆ ಸಂದೇಶ ಬಂದಿದ್ದು, ಟಾಸ್ಕ್ ಮಾಡಿದ್ದಲ್ಲಿ ಹೆಚ್ಚು ಹಣ ಬರುವು ದಾಗಿ ನಂಬಿಸಲಾಗಿತ್ತು. ಅದರಂತೆ ಆಕೆ ವಿವಿಧ ಹಂತಗಳಲ್ಲಿ ಆರೋಪಿ ಗಳು ಸೂಚಿಸಿದ ಖಾತೆಗೆ ಒಟ್ಟು 3,60,800ರೂ. ಹಣವನ್ನು ಹಾಕಿದ್ದರು. ಆದರೆ ಆರೋಪಿಗಳು ಆಕೆಗೆ ಯಾವುದೇ ಹಣ ನೀಡದೆ ವಂಚಿಸಿರುವುದಾಗಿ ದೂರಲಾಗಿದೆ.