ಉಡುಪಿಯಲ್ಲಿ 36.1 ಮಿ.ಮೀ. ಮಳೆ: ಮನೆಗೆ ಹಾನಿ
Update: 2026-08-23 20:50 IST
ಉಡುಪಿ, ಆ.23: ಉಡುಪಿ ಜಿಲ್ಲೆಯಾದ್ಯಂತ ಕಳೆದ 24ಗಂಟೆ ಅವಧಿ ಯಲ್ಲಿ ಸರಾಸರಿ 36.1.ಮಿ.ಮೀಟರ್ ಮಳೆಯಾಗಿದ್ದು, ಮರ ಬಿದ್ದು ಮನೆಯೊಂದಕ್ಕೆ ಹಾನಿಯಾಗಿದೆ.
ಕಾರ್ಕಳ ತಾಲೂಕಿನಲ್ಲಿ 17.6ಮಿ.ಮೀ., ಉಡುಪಿ- 18.6 ಮಿ.ಮೀ., ಬೈಂದೂರು- 16.4 ಮಿ.ಮೀ., ಬ್ರಹ್ಮಾವರ- 6.3ಮಿ.ಮೀ., ಕಾಪು- 13.1ಮಿ.ಮೀ., ಹೆಬ್ರಿ-32.5 ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಕುಂದಾಪುರ ತಾಲೂಕಿನ ಹಂಗವಳ್ಳಿ ಗ್ರಾಮದ ಆಂತೋನಿ ಕಾವೆಲ್ಲೋ ಎಂಬವರ ವಾಸ್ತವ್ಯದ ಮನೆ ಮೇಲೆ ಮರ ಬಿದ್ದು ಭಾಗಶ: ಹಾನಿಯಾಗಿದ್ದು ಇದರಿಂದ ಸುಮಾರು 75ಸಾವಿರ ರೂ. ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.