ಸಿನೀಯರ್ ಛೇಂಬರ್ ಇಂಟರ್ನಾಶನಲ್ ಉಡುಪಿ ಇಂದ್ರಾಳಿ ಘಟಕ ಅಸ್ತಿತ್ವಕ್ಕೆ
ಉಡುಪಿ: ಅಂತಾರಾಷ್ಟ್ರೀಯ ವ್ಯಕ್ತಿತ್ವ ವಿಕಸನ ಮತ್ತು ಸೇವಾ ಸಂಸ್ಥೆ ಸೀನಿಯರ್ ಛೇಂರ್ಬ ಇಂಟರ್ನಾಶನಲ್‌ನ ಕಾರ್ಕಳ ರಾಕ್ ಸಿಟಿ ಪ್ರಾಯೋಜಿತ ನೂತನ ಘಟಕವಾಗಿ ಎಸ್‌ಸಿಐ ಉಡುಪಿ ಇಂದ್ರಾಳಿ ಘಟಕ ಅಸ್ಥಿತ್ವಕ್ಕೆ ಬಂದಿದೆ.
ಉಡುಪಿಯಲ್ಲಿ ನಡೆದ ಪದಪ್ರದಾನ ಸಮಾರಂಭದಲ್ಲಿ ಸೀನಿಯರ್ ಛೇಂಬರ್ ಅಂತಾರಾಷ್ಟ್ರೀಯ ಅಧ್ಯಕ್ಷ ವಾಸು ದೇವನ್ ಇವರಿಂದ ಮನೋಜ್ ಕಡಬ ಚಾರ್ಟರ್ ಸ್ವೀಕರಿಸಿದರು. ಸಂಸ್ಥೆಯ ಅಂತಾರಾಷ್ಟ್ರೀಯ ಪದಾಧಿಕಾರಿಗಳಾದ ಸುಧಾಕರ್ ಪೂಜಾರಿ, ಕುಮಾರ್ ಕೂರ್ಸೆ, ಚಿತ್ರಕುಮಾರ್, ಹುಸೈನ್ ಹೈಕಾಡಿ ಹಾಗೂ ಕಾರ್ಕಳ ಘಟಕದ ಅಧ್ಯಕ್ಷ ಮೋಹನ್ ನಕ್ರೆ, ಜೊತೆ ಕಾರ್ಯದರ್ಶಿ ಶಾಲಿನಿ ಮತ್ತು ಕೋಶಾಧಿಕಾರಿ ಸತೀಶ್ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿ ಮನೋಜ್ ಕಡಬ, ಉಪಾಧ್ಯಕ್ಷರಾಗಿ ಸುಬ್ರಮಣ್ಯ ಶೇರಿಗಾರ್, ಕಾರ್ಯದರ್ಶಿಯಾಗಿ ಸೆಲ್ವರಾಜ್, ಕೋಶಾಧಿ ಕಾರಿಯಾಗಿ ಪ್ರೀತಿ ಕಲ್ಯಾಣಪುರ, ಮಹಿಳಾ ವಿಭಾಗದ ನಿರ್ದೇಶಕಿಯಾಗಿ ಶೆರ್ಲಿ ಮನೋಜ್, ಯುವ ವಿಭಾಗದ ನಿರ್ದೇಶಕಿಯಾಗಿ ಸಂಧ್ಯಾ ರಾಜೇಶ್, ನಿರ್ದೇಶಕರುಗಳಾಗಿ ನಾಗರಾಜ ಹೆಬ್ಬಾರ್, ಕೃಷ್ಣರಾಜ ತಂತ್ರಿ, ಬಾಸುಮ ಕೊಡಗು, ಶೈನಿ ಸತ್ಯಭಾಮ, ಡಾ.ಜಗದೀಶ ಜೋಗಿ, ಮುರಲೀಧರ ಹೊಸನಗರ ಮತ್ತು ಯುವ ವಿಭಾಗದ ಅಧ್ಯಕ್ಷರಾಗಿ ಝಯಾನ್ ಹೈಕಾಡಿ ಅಧಿಕಾರ ಸ್ವೀಕರಿಸಿದರು.