ಬಿಎ: ಪಲ್ಲವಿ ಕೊಡಗು 4ನೇ ರ್ಯಾಂಕ್
Update: 2025-03-11 18:22 IST
ಉಡುಪಿ, ಮಾ.11: ತೆಂಕನಿಡಿಯೂರು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಇಂಗ್ಲಿಷ್ ಎಂ.ಎ. ವ್ಯಾಸಂಗ ಮಾಡುತ್ತಿರುವ ಪಲ್ಲವಿ ಕೊಡಗು, ಮಂಗಳೂರು ವಿಶ್ವವಿದ್ಯಾನಿಲಯದ ಬಿಎ ವಿಭಾಗದಲ್ಲಿ ನಾಲ್ಕನೇ ರ್ಯಾಂಕ್ ಪಡೆದಿದ್ದಾರೆ.
ಬಾಲ್ಯದಿಂದಲೇ ವಿವಿಧ ಕಲಾ ಪ್ರಕಾರಗಳಲ್ಲಿ ತೊಡಗಿಸಿಕೊಂಡ ಪಲ್ಲವಿ ನಾಟಕ ಸಿನಿಮಾ ಸಂಗೀತ ಯಕ್ಷಗಾನ ನೃತ್ಯ ಹೀಗೆ ವಿವಿಧ ಪ್ರಕಾರಗಳಲ್ಲಿ ನಿರಂತರ ಸಕ್ರಿಯವಾಗಿದ್ದಾರೆ. ಕವನ ಕಥೆ ರಚನೆ ಮತ್ತು ಭಾಷಾಂತರ ಕೆಲಸಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.