ಮೇ 5ರಿಂದ ಬೆಂಗಳೂರು-ಮುರ್ಡೇಶ್ವರ ರೈಲಿಗೆ ಎಲ್‌ಎಚ್‌ಬಿ ಕೋಚ್
Update: 2025-03-05 20:16 IST
ಸಾಂದರ್ಭಿಕ ಚಿತ್ರ
ಉಡುಪಿ, ಮಾ.5: ಬೆಂಗಳೂರು ಹಾಗೂ ಮುರ್ಡೇಶ್ವರ ನಡುವೆ ಸಂಚರಿಸುವ ದೈನಂದಿನ ಎಕ್ಸ್‌ಪ್ರೆಸ್ ರೈಲು ಮೇ 5ರಿಂದ (ಬೆಂಗಳೂರು) ಹಾಗೂ ಮೇ 6ರಿಂದ (ಮುರ್ಡೇಶ್ವರ) ಆಧುನಿಕ ಎಲ್‌ಎಚ್‌ಬಿ ಕೋಚ್‌ಗಳೊಂದಿಗೆ ಸಂಚರಿಸಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ -ಮುರ್ಡೇಶ್ವರ- ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ನಡುವೆ ಈಗ 22 ಸಾಂಪ್ರದಾಯಿಕ ಕೋಚ್‌ಗಳೊಂದಿಗೆ ಪ್ರತಿದಿನ ಸಂಚರಿಸುವ ಈ ರೈಲು, ಮೇ5ರಿಂದ 20 ಎಲ್‌ಎಚ್‌ಬಿ ಕೋಚ್ ಗಳೊಂದಿಗೆ ಸಂಚರಿಸಲಿದೆ. ರೈಲು ಒಂದು ಫಸ್ಟ್ ಎಸಿ, 2 ಟೂ ಟಯರ್ ಎಸಿ, 4 3ಟಯರ್ ಎಸಿ, 7 ಸ್ಲೀಪರ್ ಕೋಚ್, 4 ಜನರಲ್ ಹಾಗೂ ಎರಡು ಜನರೇಟರ್ ಕಾರ್‌ಗಳನ್ನು ಹೊಂದಿರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.