ಉಡುಪಿ ಜಿಲ್ಲೆಯಲ್ಲಿ ಮಾದರಿ ಸೋಲಾರ್ ಗ್ರಾಮಕ್ಕಾಗಿ 5 ಗ್ರಾಪಂಗಳ ಆಯ್ಕೆ: ಕೋಟ ಶ್ರೀನಿವಾಸ ಪೂಜಾರಿ
ಉಡುಪಿ, ಮೇ 16: ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಡಿ ಸೋಲಾರ್ ಪಂಚಾಯತ್‌ಗಳಾಗಿ ಆಯ್ಕೆ ಮಾಡಲು ಉಡುಪಿ ಜಿಲ್ಲೆಯ 5 ಪಂಚಾಯತ್‌ಗಳ ಆಯ್ಕೆಗೆ ಶಿಪಾರಸ್ಸು ಮಾಡಲಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಬಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದ ಸಭೆಯಲ್ಲಿ ಮಾತನಾಡಿದ ಅವರು, ಕುಂದಾಪುರ ವಿಧಾನ ಸಬಾ ಕ್ಷೇತ್ರದ ಕೋಟತಟ್ಟು, ಬೈಂದೂರಿನ ಕಿರಿಮಂಜೇಶ್ವರ, ಕಾರ್ಕಳದ ನಿಟ್ಟೆ, ಕಾಪುವಿನ ಮಜೂರು, ಉಡುಪಿಯ ಉಪ್ಪೂರು ಪಂಚಾಯತ್‌ಗಳನ್ನು ಸೂರ್ಯ ಘರ್ ಯೋಜನೆಯಡಿ ಮಾದರಿ ಸೋಲಾರ್ ಗ್ರಾಮ ಪಂಚಾಯತ್‌ಗಳಾಗಿ ಅಳವಡಿಸಿಕೊಳ್ಳಲು ಶಿಪಾರಸ್ಸು ಮಾಡಲಾಗಿದೆ ಎಂದರು.
ಪ್ರಧಾನ ಮಂತ್ರಿ ಸೂರ್ಯಘರ್ ಯೋಜನೆಯಡಿ ಮನೆಮನೆಗೂ ಸ್ವಯಂ ವಿದ್ಯುತ್ ಉತ್ಪಾದನೆ ಮಾಡಿ ಕೊಳ್ಳುವ ಸಂಕಲ್ಪದಲ್ಲಿ 300 ಯೂನಿಟ್ ವಿದ್ಯುತ್ ಉತ್ಪಾದನೆ ಗುರಿಯೊಂದಿಗೆ 2,20,000ರೂ. ಸಾಲ ಸೌಲಭ್ಯವನ್ನು ರಾಷ್ಟ್ರೀಕೃತ ಬ್ಯಾಂಕುಗಳು ನೀಡುತ್ತಿದ್ದು, ಸೋಲಾರ್ ಅಳವಡಿಕೆ ಮಾಡಿಕೊಂಡ ಕುಟುಂಬ ಗಳಿಗೆ 78,000ರೂ. ಸಬ್ಸಿಡಿ ನೀಡಲಾಗುತ್ತಿದೆ. ಈ ಯೋಜನೆ ಪ್ರತಿ ಪಂಚಾಯತ್ ಮತ್ತು ನಗರಾಡಳಿತ ಸಂಸ್ಥೆಗಳ ಎಲ್ಲಾ ಫಲಾನುಭವಿಗಳಿಗೆ ಪೂರ್ಣಪ್ರಮಾಣದ ಯೋಜನೆ ಅಳವಡಿಕೆಗೆ ಶ್ರಮ ವಹಿಸಲು ಕ್ರಮಕೈಗೊಳ್ಳ ಲಾಗುವುದು ಎಂದು ಸಂಸದರು ಹೇಳಿದರು.
ಪ್ರಥಮ ಹಂತದಲ್ಲಿ ಆಯ್ಕೆ ಮಾಡಲಾದ 5 ಪಂಚಾಯತ್‌ಗಳ ಯಶಸ್ಸನ್ನು ಪರಿಗಣಿಸಿ, ಉಳಿದೆಲ್ಲಾ ಪಂಚಾಯತ್‌ಗಳಿಗೆ ವಿಸ್ತರಿಸಲಾಗುವುದು. ಆಯ್ಕೆ ಯಾದ ಗ್ರಾಪಂಗಳಿಗೆ ವಿಶೇಷ ಅನುದಾನ ನೀಡಲು ಶಿಫಾರಸ್ಸು ಮಾಡ ಲಾಗುವುದೆಂದು ಸಂಸದ ಕೋಟ ತಿಳಿಸಿದರು.
ಸಭೆೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹ ಣಾಧಿಕಾರಿ ಪ್ರತೀಕ್ ಬಾಯಲ್, ಉಡುಪಿ ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಪಿ.ದಿನೇಶ್ ಉಪಾಧ್ಯಾಯ ಮೊದಲಾದವರು ಉಪಸ್ಥಿತರಿದ್ದರು.