ಉಡುಪಿ: ಕೆವೈಸಿ ಅಪ್‌ಡೇಟ್ ಹೆಸರಿನಲ್ಲಿ 5 ಲಕ್ಷ ರೂ. ವಂಚನೆ; ಪ್ರಕರಣ ದಾಖಲು
Update: 2025-07-01 21:26 IST
ಉಡುಪಿ: ಕೆವೈಸಿ ಅಪ್‌ಡೇಟ್ ಮಾಡುವುದಾಗಿ ನಂಬಿಸಿ ಡೆಬಿಟ್ ಕಾರ್ಡ್ ನಂಬರ್ ಪಡೆದು ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರ್ಸ್ ಆಗಿರುವ ಸಾಣೂರು ಗ್ರಮದ ಪ್ರೇಮಲತಾ(58) ಎಂಬವರಿಗೆ ಅಪರಿಚಿತ ವ್ಯಕ್ತಿ ಬ್ಯಾಂಕ್‌ನಿಂದ ಕರೆ ಮಾಡುವುದಾಗಿ ಹೇಳಿ, ಕೆವೈಸಿ ಅಪ್ಡೇಟ್ ಮಾಡಲು ಡೆಬೀಟ್ ಕಾರ್ಡ್ ನಂಬರ್ ಪಡೆದುಕೊಂಡಿದ್ದರು. ಬಳಿಕ ಜೂ.26ರಂದು ಪ್ರೇಮಲತಾ ಬ್ಯಾಂಕ್ ಖಾತೆಯಿಂದ ಅಪರಿಚಿತರು ವಿವಿಧ ಹಂತಗಳಲ್ಲಿ ಒಟ್ಟು 5,19,000/- ಹಣ ವರ್ಗಾವಣೆ ಮಾಡಿ ವಂಚಿಸಿರುವುದಾಗಿ ದೂರಲಾಗಿದೆ.