ಬ್ರಹ್ಮಾವರ: ಶೇರ್ ಖರೀದಿ ಹೆಸರಿನಲ್ಲಿ 6 ಲಕ್ಷ ರೂ. ವಂಚನೆ
Update: 2024-02-09 20:31 IST
ಬ್ರಹ್ಮಾವರ, ಫೆ.9: ಶೇರ್ ಖರೀದಿ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರದ ರಾಘವೇಂದ್ರ ಎಂಬವರಿಗೆ 2023ರ ಆಗಸ್ಟ್‌ನಲ್ಲಿ ವಾಟ್ಸಾಪ್ ಹಾಗೂ ಫೇಸ್ಬುಕ್ ಮುಖಾಂತರ ಸಂಸ್ಥೆ ಯೊಂದರ ಹೆಸರಿನಲ್ಲಿ ಪರಿಚಯವಾದ ಆರೋಪಿಗಳು, ವಾಟ್ಸಪ್ ಗ್ರೂಪ್‌ನ ಮೂಲಕ ಶೇರ್ ಟ್ರೇಡಿಂಗ್ ಬಗ್ಗೆ ತರಬೇತಿ ನೀಡಿ ಹಣ ಹೂಡಿಕೆ ಮಾಡುವಂತೆ ನಂಬಿಸಿದ್ದರು. ಅದರಂತೆ ರಾಘವೇಂದ್ರ ಒತ್ತಾಯ ಪೂರ್ವಕವಾಗಿ ಆರೋಪಿಗಳು ಸೂಚಿಸಿದ ಶೇರ್ ಸಂಸ್ಥೆಗಳಿಗೆ ಅ.11ರಿಂದ 18ರ ಮಧ್ಯೆ ಒಟ್ಟು 6,00,000ರೂ. ಹಣವನ್ನು ವರ್ಗಾವಣೆ ಮಾಡಿದ್ದರು. ಆದರೆ ಆರೋಪಿಗಳು ಹಣ ನೀಡದೆ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.