ಶಿರೂರು ಎಲ್‌ಸಿ ಗೇಟ್ ನಂ.71ರ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧ
ಸಾಂದರ್ಭಿಕ ಚಿತ್ರ
ಬೈಂದೂರು, ಆ.3: ಉಡುಪಿ, ಆ.3: ಬೈಂದೂರು ತಾಲೂಕಿನ ಶಿರೂರು ಗ್ರಾಮದ ಎಲ್‌ಸಿ ಗೇಟ್ ನಂ.71ರ ರಸ್ತೆ ಮೂಲಕ ಹಾದುಹೋಗುವ ಎಲ್ಲಾ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಇಲ್ಲಿ ಪ್ರತಿದಿನ 40-50 ರೈಲುಗಳು ಸಂಚರಿಸುವ ಸಮಯದಲ್ಲಿ ಇಲ್ಲಿನ ಗೇಟ್ ಮುಚ್ಚುವುದರಿಂದ ಸಾರ್ವ ಜನಿಕರಿಗೆ ಸಂಚಾರಕ್ಕೆ ಅಡಚಣೆ ಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ರೇಲ್ವೇ ಇಲಾಖೆಯಿಂದ ಸಾರ್ವಜನಿಕರಿಗೆ ಹಾಗೂ ವಾಹನಗಳಿಗೆ ಸಂಚರಿಸಲು ಅನುಕೂಲವಾಗುವಂತೆ ಬದಲಿ ಮಾರ್ಗವನ್ನು ನಿರ್ಮಿಸಿದ್ದು, ಅದರ ಕಾಮಗಾರಿಯು ಪೂರ್ಣಗೊಳಿಸಲಾಗಿದೆ.
ಆ ಹಿನ್ನೆಲೆಯಲ್ಲಿ ಎಲ್‌ಸಿ ಗೇಟ್ ನಂ.71ರ ರಸ್ತೆ ಬದಲು ಎಲ್ಲಾ ವಾಹನಗಳು ಶಿರೂರು ಟೋಲ್ ಗೇಟ್ ನಿಂದ ಸುಮಾರು 500 ಮೀಟರ್ ಹಿಂದಕ್ಕೆ ದುರ್ಗಾಂಬಿಕಾ ಹಾಲ್ ಹಾಗೂ ಶಿರೂರು ಕೆರೆಕಟ್ಟೆ ಬಸ್ ನಿಲ್ದಾಣದ ಬಳಿ ಇರುವ ರಸ್ತೆಯಿಂದ ರೇಲ್ವೇ ಓವರ್ ಬ್ರಿಡ್ಜ್ ಮೂಲಕ ಎಲ್‌ಸಿ ಗೇಟ್ ನಂ..71ರ ಸಮೀಪದ ಪಶ್ಚಿಮ ದಿಕ್ಕಿನಲ್ಲಿ ರೇಲ್ವೇ ಇಲಾಖೆಯಿಂದ ಹೊಸದಾಗಿ ನಿರ್ಮಾಣ ಆಗಿರುವ ರಸ್ತೆ ಮೂಲಕ ಸಂಚರಿಸ ಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಆದೇಶದಲ್ಲಿ ತಿಳಿಸಿದ್ದಾರೆ.