×
Ad

ಬನ್ನಂಜೆ 90 ಉಡುಪಿ ನಮನ ಆಮಂತ್ರಣ ಪತ್ರಿಕೆ ಬಿಡುಗಡೆ

Update: 2025-07-15 19:34 IST

ಉಡುಪಿ, ಜು.15: ವಿದ್ಯಾವಾಚಸ್ಪತಿ ಪದ್ಮಶ್ರೀ ಬನ್ನಂಜೆ ಗೋವಿಂದಾಚಾರ್ಯ ಅವರ 90ನೇ ಜನ್ಮ ದಿನಾಚರಣೆ ಅಂಗವಾಗಿ ಉಡುಪಿ ಅಭಿಮಾನಿಗಳ ವತಿಯಿಂದ ಆ.3ರಂದು ಎಂಜಿಎಂ ಕಾಲೇಜಿನಲ್ಲಿ ನಡೆಯಲಿರುವ ಬನ್ನಂಜೆ 90 ಉಡುಪಿ ನಮನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ರವಿವಾರ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಬನ್ನಂಜೆ ಉಡುಪಿ ನಮನ ಕಾರ್ಯಕ್ರಮದ ಆಯೋಜನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಆಸ್ಟ್ರೋ ಮೋಹನ್, ಸಂಚಾಲಕರಾದ ಜನಾರ್ದನ ಕೊಡವೂರು, ರವಿರಾಜ್ ಎಚ್.ಪಿ., ಕೋಶಾಧಿಕಾರಿ ಪ್ರೊ. ಸದಾಶಿವ್ ರಾವ್, ಉಪಾಧ್ಯಕ್ಷರಾದ ಪ್ರೊಫೆಸರ್ ಶಂಕರ್, ನಾರಾಯಣ ಮಡಿ, ಡಾ.ಭಾರ್ಗವಿ ಐತಾಳ್, ಡಾ.ರಾಮ ಚಂದ್ರ ಐತಾಳ್, ಕಾರ್ಯದರ್ಶಿಗಳಾದ ರಾಜೇಶ್ ಭಟ್ ಪಣಿಯಾಡಿ, ಪೂರ್ಣಿಮಾ ಜನಾರ್ದನ್, ಪ್ರಭಾಕರ ತುಮರಿ, ಹಿರಿಯರಾದ ಪ್ರಭಾವತಿ ವಿಶ್ವನಾಥ್ ಶೆಣೈ, ಭಾಸ್ಕರ್ ರಾವ್ ಸಮಿತಿಯ ಸದಸ್ಯರಾದ ರಾಘವೇಂದ್ರ ಪ್ರಭು ಕರ್ವಾಲು, ಸುಶಾಂತ್ ಕೆರೆಮಠ, ಮಹೇಶ್ ಠಾಕೂರ್, ಸತೀಶ್ ಕೊಡವೂರು, ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಜಯಶ್ರೀ ಉಡುಪಿ, ಸುಮಿತ್ರ ಕೆರೆಮಠ, ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ, ಡಾ.ಗಣೇಶ್ ಪ್ರಸಾದ್ ನಾಯಕ್, ರಾಮಾಂಜಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News