ಹೂಡೆ ಸಾಲಿಹಾತ್ ಕಾಲೇಜು ಶೇ.96.15 ಫಲಿತಾಂಶ
Update: 2025-04-08 19:34 IST
ಸನ್ಹ, ರಿಝಾ, ಇಫ್ರಾ, ರಾಹಿಲಾ
ಆರಿನ್, ಹಸೀಬ, ಝಿಯಾ, ಖದೀಜಾ
ಉಡುಪಿ, ಎ.8: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೋನ್ಸೆ-ಹೂಡೆಯ ಸಾಲಿಹಾತ್ ಬಾಲಕಿಯರ ಪದವಿ ಪೂರ್ವ ಕಾಲೇಜು ಶೇ.96.15 ಫಲಿತಾಂಶ ದಾಖಲಿಸಿದೆ.
ವಾಣಿಜ್ಯ ವಿಭಾಗದಲ್ಲಿ ಒಟ್ಟು 29 ವಿದ್ಯಾರ್ಥಿಗಳಲ್ಲಿ 28 ಮಂದಿ ಉತ್ತೀರ್ಣರಾಗಿ ಶೇ.97 ಹಾಗೂ ವಿಜ್ಞಾನ ವಿಭಾಗದಲ್ಲಿ ಒಟ್ಟು 23 ವಿದ್ಯಾರ್ಥಿಗಳಲ್ಲಿ 22 ಮಂದಿ ಉತ್ತೀರ್ಣಗೊಂಡು ಶೇ.96ರಷ್ಟು ಫಲಿತಾಂಶ ಪಡೆದುಕೊಂಡಿದೆ.
ವಿಶಿಷ್ಟ ಶ್ರೇಣಿಯಲ್ಲಿ 16, ಪ್ರಥಮ ಶ್ರೇಣಿಯಲ್ಲಿ 29, ದ್ವಿತೀಯ ಶ್ರೇಣಿಯಲ್ಲಿ 5 ಮಂದಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಸನ್ಹ(576) ಶೇ.96, ರಿಝಾ ಫಲಕ್ 562 ಶೇ.93.66ಸ ಇಫ್ರಾ ಆಯಿಷಾ 561(ಶೇ.93.5), ರಾಹಿಲಾ ಮುಸ್ಕಾನ್ 559(ಶೇ.93.16), ಆರಿನ್ ಇಬ್ರಾಹಿಂ 551 (ಶೇ.91.83) ಹಾಗೂ ವಿಜ್ಞಾನ ವಿಭಾಗದಲ್ಲಿ ಹಸೀಬ ರಹಮತುಲ್ಲಾಹ್ 564(ಶೇ.94), ಝಿಯಾ ಮೆಹುಶ್ ಜಾಕೀರ್ 542(ಶೇ.90.33), ಖದೀಜಾ ಬಿಲಾಲ್ 540(ಶೇ.90) ಅಂಕಗಳನಞ್ನು ಪಡೆದು ಸಾಧನೆಗೈದಿದ್ದಾರೆ.