×
Ad

ಫೆ.11ರಂದು ಬಿ.ಕೆ.ಶಿವಾನಿಯಿಂದ ಪ್ರೇರಣಾತ್ಮಕ ಪ್ರವಚನ

Update: 2024-02-03 18:40 IST

ಮಣಿಪಾಲ, ಫೆ.3: ಬ್ರಹ್ಮಾಕುಮಾರೀಸ್ ಮಣಿಪಾಲ ಸೇವಾ ಕೇಂದ್ರದ ವತಿಯಿಂದ ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ವಾಗ್ಮಿ ಬಿ.ಕೆ.ಶಿವಾನಿ ಅವರಿಂದ ಪ್ರೇರಣಾತ್ಮಕ ಪ್ರವಚನ ಕಾರ್ಯಕ್ರಮ ಫೆ.11ರಂದು ಸಂಜೆ 6ಗಂಟೆಯಿಂದ 8ಗಂಟೆಯವರೆಗೆ ಮಣಿಪಾಲದ ಎಂಜೆಸಿ ಮೈದಾನದಲ್ಲಿ ನಡೆಯಲಿದೆ ಎಂದು ಕೇಂದ್ರದ ಸಂಚಾಲಕಿ ಬಿ.ಕೆ.ಸೌರಭ ತಿಳಿಸಿದ್ದಾರೆ.

ಮಣಿಪಾಲದ ಬ್ರಹ್ಮಾಕುಮಾರೀಸ್ ಸೇವಾಕೇಂದ್ರದಲ್ಲಿ ಕರೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಈ ಪ್ರವಚನ ಕಾರ್ಯಕ್ರಮದಲ್ಲಿ 5ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಪ್ರವೇಶ ಉಚಿತವಾಗಿದ್ದು, ನೋಂದಣಿ ಕಡ್ಡಾಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಭಿಕರ ಮನೋ ಶಕ್ತಿಯನ್ನು ಹೆಚ್ಚಿಸುವ, ಸದಾ ಸಂತೋಷ ವಾಗಿರಲು ಸರಳ ಸೂತ್ರಗಳು, ಜೀವನದಲ್ಲಿ ಸಕಾರಾತ್ಮಕ ಪರಿವರ್ತನೆಗೆ ಪ್ರೇರಣೆ ಹಾಗೂ ರಾಜಯೋಗ ಧ್ಯಾನ ಮಾಡುವ ಸುಲಭ ವಿಧಾನವನ್ನು ಈ ಪ್ರವಚನ ದಲ್ಲಿ ಶಿವಾನಿಯವರು ತೋರಿಸಿಕೊಡಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಶಿಕ್ಷಕಿ ಬಿ.ಕೆ.ಸುಜಾತ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News