×
Ad

ಫೆ.11ರಿಂದ ಲೇ-ಕೌನ್ಸೆಲರ್ ತರಬೇತಿ ಕಾರ್ಯಾಗಾರ

Update: 2024-02-06 19:07 IST

ಉಡುಪಿ, ಫೆ.6: ಉಡುಪಿ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ಮತ್ತು ಒನ್ ಗುಡ್ ಸ್ಟೆಪ್ ಆಶ್ರಯದಲ್ಲಿ ಎರಡನೇ ತಂಡದ ಲೇ-ಕೌನ್ಸೆಲರ್ ತರಬೇತಿ ಕಾರ್ಯಾಗಾರವನ್ನು ಫೆ.11ರಿಂದ ಹಮ್ಮಿಕೊಳ್ಳಲಾಗಿದೆ.

ಕಳೆದ ಆಕ್ಟೋಬರನಲ್ಲಿ ಆರಂಭಿಸಲಾದ ಮೊದಲ ಬ್ಯಾಚ್‌ನಲ್ಲಿ 27 ಸ್ವಯಂ ಸೇವಕರು ತರಬೇತಿಯನ್ನು ಪಡೆದು ಕೊಂಡಿದ್ದಾರೆ. ಈ ಕಾರ್ಯಕ್ರಮವು 12 ವಾರಗಳ ತರಬೇತಿ ಕಾರ್ಯಕ್ರಮವಾಗಿದ್ದು ಪ್ರತಿ ರವಿವಾರ ನಡೆಸಲಾಗುತ್ತದೆ. ತರಬೇತಿಯಲ್ಲಿ ಸಂವಹನ ಕೌಶಲ್ಯ, ಆಲಿಸುವ ಕೌಶಲ್ಯ, ಪೂರ್ವಗ್ರಹ ಪೀಡಿತ ವಲ್ಲದ ಸಂವಹನ, ಬಿಕ್ಕಟಿನ ಮಧ್ಯಸ್ಥಿಕೆ, ಮಾನಸಿಕ ಆರೋಗ್ಯ ಸಮಸ್ಯೆಗಳು ಅವುಗಳ ಲಕ್ಷಣ, ಮತ್ತು ಮಾನಸಿಕ ಆರೋಗ್ಯ ಪರಿಸ್ಥಿತಿಗಳು, ಒತ್ತಡ ನಿರ್ವಹಣೆ, ಕುರಿತು ತರಬೇತಿ ನೀಡಲಾಗುವುದು.

ತರಬೇತಿಯನ್ನು ಪಡೆಯಲು ಮಾನಸಿಕ ಆರೋಗ್ಯದ ಬಗ್ಗೆ ಪೂರ್ವ ಜ್ಞಾನ ಅಥವಾ ತರಬೇತಿ ಅಗತ್ಯವಿಲ್ಲ, ಸಂಕಷ್ಟ ಮತ್ತು ಒತ್ತಡದಲ್ಲಿ ಇರುವರಿಗೆ ಸಹಾಯ ಮಾಡುವ ಮನಸ್ಥಿತಿ ಇದ್ದು, ಭಾಷ ಜ್ಞಾನ ಇದ್ದರೆ ಸಾಕಾಗುತ್ತದೆ. ಆಸಕ್ತರು ಫೆ.8ರೊಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಸೌಜಜ್ಯ ಕೆ. ಶೆಟ್ಟಿ, ಆಡಳಿತಾಧಿಕಾರಿಗಳು, ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ ಮತ್ತು ಅಮಿತಾ ಪೈ, ಒನ್ ಗುಡ್ ಸ್ಟೆಪ್(ಮೊ-9538886291/9986411788) ಅವರನ್ನು ಸಂಪರ್ಕಿಸಬಹುದು ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಪಿ.ವಿ.ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News