11ನೇ ವಯಸ್ಸಿನಲ್ಲೇ ಹಾಫಿಝ್ ಆದ ಅರ್ಷಾನ್
ಮಲ್ಪೆ, ಸೆ.20: ಖಾನ್ ಮೊಹಮ್ಮದ್ ಅರ್ಷಾನ್ ಕೇವಲ 11ನೇ ವಯಸ್ಸಿನಲ್ಲಿಯೇ ಪವಿತ್ರ ಕುರಾನ್‌ನ್ನು ಸಂಪೂರ್ಣವಾಗಿ ಕಂಠಪಾಠ ಮಾಡಿ ಹಾಫಿಝ್ ಆಗಿದ್ದಾರೆ.
ಮಲ್ಪೆ ನಿವಾಸಿ ಮೊಹಮ್ಮದ್ ಅಫ್ಝಲ್ ಹಾಗೂ ನಝೀಫಾ ಆಫ್ರೀನ್ ದಂಪತಿ ಪುತ್ರನಾದ ಮೊಹಮ್ಮದ್ ಅರ್ಷಾನ್, ಉಡುಪಿಯ ಆಲ್ ಇಬಾದ್ ಇಂಡಿಯನ್ ಸ್ಕೂಲ್‌ನಲ್ಲಿ 6ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.