ಜ.13ರಿಂದ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಆರ್ಟಿಸ್ಟ್ರಿ ಕಲಾತ್ಮಕ ಚಿನ್ನಾಭರಣಗಳ ಪ್ರದರ್ಶನ-ಮಾರಾಟ
ಉಡುಪಿ, ಜ.11: ನಗರದ ಮಲಬಾರ್ ಗೋಲ್ದ್ ಆ್ಯಂಡ್ ಡೈಮಂಡ್ಸ್ ಶಾಖೆಯಲ್ಲಿ ‘ಆರ್ಟಿಸ್ಟ್ರಿ’ ಕಲಾತ್ಮಕ ಚಿನ್ನಾಭರಣಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳವು ಜನವರಿ 13ರಿಂದ 21ರವರೆಗೆ ನಡೆಯಲಿದೆ.
ಆರ್ಟಿಸ್ಟ್ರಿ ಕಲಾತ್ಮಕ ಚಿನ್ನಾಭರಣ ಪ್ರದರ್ಶನದಲ್ಲಿ ವಿವಿಧ ನಮೂನೆಯ ಚಿನ್ನ ಮತ್ತು ವಜ್ರಾಭರಣಗಳ ಸಂಗ್ರಹಗಳು ಪ್ರದರ್ಶನಗೊಳ್ಳಲಿವೆ. ಈ ಪ್ರದರ್ಶನವನ್ನು ವಿಶೇಷ ಅತಿಥಿಗಳಾದ ಆಶಾ ಆರ್ ಶೆಟ್ಟಿ, ಶಾಲೆಟ್ ವಾಲ್ಟರ್ ಮಥಾಯಸ್, ಲಕ್ಷ್ಮಿ ಅಂಕಿತ ಆಚಾರ್ಯ ಅದ್ದೂರಿಯಾಗಿ ಅನಾವರಣ ಗೊಳಿಸಲಿದ್ದಾರೆ.
‘ಮೈನ್’ನಲ್ಲಿ ವಜ್ರಾಭರಣಗಳ ಅಭೂತ ಪೂರ್ವ ಸಂಗ್ರಹವಿದೆ. ನವವಧುವಿನ ವಿಶಿಷ್ಟ ಸಂಗ್ರಹ ಹಾಗೂ ಪ್ರಮಾಣಿಕೃತ ವಜ್ರಾಭಾರಣಗಳಿದ್ದು ‘ಡಿವೈನ್’ನಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಚಿನ್ನಾಭರಣಗಳ ಸಂಗ್ರಹವಿರಲಿದೆ. ‘ಪ್ರಶಿ’ಯದಲ್ಲಿ ರುಬಿ, ಎಮರಾಲ್ ಅಮೂಲ್ಯ ಹರಳುಗಳ ಹಾಗೂ ಸಮಕಾಲೀನ ಚಿನ್ನಾಭರಣಗಳ ಸಂಗ್ರಹವಿರುತ್ತದೆ. ‘ಎಥಿನಿಕ್ಸ್’ನಲ್ಲಿ ಕೈಕುಶಲತೆಯ ಸೊಬಗಿನ ಪಾರಂಪರಿಕ ಚಿನ್ನಾಭರಣಗಳ ಪ್ರದರ್ಶನ ಹಾಗೂ ಮಾರಾಟವಿದೆ.
‘ಎರ’ ವಿಭಾಗದಲ್ಲಿ ಆನ್ಕಟ್ ಡೈಮಂಡ್ಸ್ ಹಾಗೂ ಚಿನ್ನಾಭರಣಗಳ ಅಪೂರ್ವ ಸಂಗ್ರಹ ಈ ಪ್ರದರ್ಶನದ ವಿಶೇಷವಾಗಿದೆ. ಸಂಪೂರ್ಣ ಪಾರದರ್ಶಕ, ಉಚಿತ ನಿರ್ವಹಣೆ, ವಿನಿಮಯದಲ್ಲಿ ಶೂನ್ಯ ಕಡಿತ, ಬೈಬ್ಯಾಕ್ ಗ್ಯಾರಂಟಿ, ಉಚಿತ ವಿಮೆ, ಎಲ್ಲಾ ಆಭರಣಗಳು ಸಹ ಹಾಲ್ ಮಾರ್ಕ್ ಇದ್ದು, 28 ರೀತಿಯ ಪರೀಕ್ಷೆ ಮಾಡಿದ ವಜ್ರಾಭರಣಗಳು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ನ ವಿಶೇಷತೆಗಳಾಗಿವೆ.
ಈ ಸಂದರ್ಭದಲ್ಲಿ ಗ್ರಾಹಕರಿಗೆ ಚಿನ್ನಾಭರಣಗಳ ಮೇಲೆ ಫೇರ್‌ಪ್ರೈಸ್ ಫ್ರಾಮಿಸ್, ವಿಶೇಷವಾಗಿ ಜ.13 ಹಾಗೂ 14ರಂದು ಡೈಮಂಡ್ಸ್ ಮೇಲೆ ಶೇ.25ರ ತನಕ ರಿಯಾಯಿತಿ, ಬ್ರಾಂಡೆಡ್ ವಾಚ್‌ಗಳಾದ ಟಿಸ್ಸೋಟ್, ರೇಡೋ, ಫಾಸಿಲ್, ಟೈಮಕ್ಸ್, ಸೀಕೋ, ಆಲ್ಬೋ ವಾಚ್‌ಗಳ ಮೇಲೆ ಕಡಿತ ಇದೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ಅಸಿಸ್ಟೆಂಟ್ ಮಾರ್ಕೆಟಿಂಗ್ ಮ್ಯಾನೇಜರ್ ತಂಝೀಮ್ ಶಿರ್ವ ತಿಳಿಸಿದ್ದಾರೆ.