×
Ad

13 ವರ್ಷಗಳ ವನವಾಸ ಮುಗಿದಿದೆ: ಜನಾರ್ದನ ರೆಡ್ಡಿ

Update: 2024-01-19 21:07 IST

ಉಡುಪಿ, ಜ.19: ನನ್ನ 13 ವರ್ಷಗಳ ವನವಾಸ ಮುಗಿಸಿ ಮತ್ತೆ ಶಾಸಕನಾಗಿದ್ದೇನೆ. ಪುತ್ತಿಗೆ, ಪೇಜಾವರ ಸ್ವಾಮಿಜಿ ಅನುಗ್ರಹದಿಂದ ನನ್ನೆಲ್ಲಾ ಸಮಸ್ಯೆಗಳು ಬಗೆಹರಿದಿವೆ ಎಂದು ಮಾಜಿ ಸಚಿವ, ಹಾಲಿ ಶಾಸಕ ಜನಾರ್ದನ ರೆಡ್ಡಿ ಹೇಳಿದ್ದಾರೆ.

ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ನಡೆದ ಸಂಧ್ಯಾ ದರ್ಬಾರ್‌ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಬಾವುಕನಾಗಿ ಮಾತನಾಡಿದರು.

ಮಲ್ಪೆ ಸಮೀಪದ ಸೈಂಟ್ ಮೇರೀಸ್ ದ್ವೀಪವನ್ನು ಶ್ರೀಕೃಷ್ಣ ದ್ವೀಪ ಮಾಡುವ ಯೋಜನೆ ಇತ್ತು. ದ್ವೀಪದಲ್ಲಿ ಕೃಷ್ಣನ ದೊಡ್ಡ ಮೂರ್ತಿ ಹಾಗೂ ಭವನ ನಿರ್ಮಿಸುವ, ಪ್ರವಾಸಿಗರಿಗೆ ಬೋಟಿಂಗ್ ವ್ಯವಸ್ಥೆ ಮಾಡುವ ಕನಸಿತ್ತು. ಆದರೆ ನನಗೆ ಬಂದ ಕೆಟ್ಟ ಘಳಿಗೆಯಿಂದ ಅದು ಸಾಧ್ಯವಾಗಿಲ್ಲ ಎಂದರು.

ಶ್ರೀಕೃಷ್ಣನ ಆಶೀರ್ವಾದದಿಂದ ಮತ್ತೆ ಅಧಿಕಾರ ಸಿಕ್ಕರೆ ಆ ಕೆಲಸ ಮಾಡುತ್ತೇವೆ. ಬಂಧನದಿಂದ ಬಿಡುಗಡೆಯಾಗಿ 48 ಗಂಟೆ ಗಳಲ್ಲಿ ಪೇಜಾವರ ಶ್ರೀಗಳು ನನ್ನ ಮನೆಗೆ ಬಂದರು. ಶ್ರೀವಿಶ್ವೇಶತೀರ್ಥರ ಆಶೀರ್ವಾದವನ್ನು ಸದಾ ಸ್ಮರಣೆ ಮಾಡುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News