×
Ad

ಜ.13: ಗಾಂಧಿಯನ್ ಸೆಂಟರ್‌ನಲ್ಲಿ ಡಾ.ಪ್ರಕಾಶ್ ಭಟ್‌ರೊಂದಿಗೆ ಸಂವಾದ

Update: 2025-01-12 19:53 IST

ಉಡುಪಿ, ಜ.12: ‘ಹಳ್ಳಿಗಳನ್ನು ಕಟ್ಟುವ ಕಷ್ಟ ಸುಖ’ ಪುಸ್ತಕದ ಕುರಿತು ಅದರ ಲೇಖಕ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಡಾ. ಪ್ರಕಾಶ್ ಭಟ್ ಅವರ ವಿಶೇಷ ಉಪನ್ಯಾಸ ಹಾಗೂ ಅವರೊಂದಿಗೆ ಸಂವಾದ ಕಾರ್ಯಕ್ರಮ ಜ.13ರ ಬೆಳಗ್ಗೆ 10:30ಕ್ಕೆ ಮಾಹೆಯ ಗಾಂಧಿಯನ್ ಸೆಂಟರ್‌ನ ಸರ್ವೋದಯ ಸಭಾಂಗಣದಲ್ಲಿ ನಡೆಯಲಿದೆ.

ಈ ಕೃತಿಯ ಪ್ರಕಾಶಕ ಮತ್ತು ಲೇಖಕ ಜಿ.ಎನ್. ಮೋಹನ್ ಅಧ್ಯಕ್ಷತೆ ಕಾರ್ಯಕ್ರಮದ ವಹಿಸಲಿದ್ದಾರೆ. ಕಾರ್ಯಕ್ರಮ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್(ಜಿಸಿಪಿಎಎಸ್) ಮತ್ತು ಬಹುರೂಪಿ ಫೌಂಡೇಶನ್ ಬೆಂಗಳೂರು ಇವರ ಆಶ್ರಯದಲ್ಲಿ ನಡೆಯಲಿದೆ.

ಸಮಾಜ ವಿಜ್ಞಾನಿಯಾದ ಧಾರವಾಡದ 67 ವರ್ಷ ಪ್ರಾಯದ ಡಾ. ಪ್ರಕಾಶ್ ಭಟ್ ಕಳೆದ ಹಲವಾರು ವರ್ಷಗಳಿಂದ ಹಳ್ಳಿಗಳನ್ನು ಕಟ್ಟುವ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದ್ದು, ಈ ಪುಸ್ತಕ ಅವರ ಅನುಭವದ ಪರಿಪಾಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News