×
Ad

ಫೆ.24ಕ್ಕೆ ಉಡುಪಿಯಲ್ಲಿ ಆಝಾದ್ ಹಿಂದ್- ಶಿವಾಜಿಯಿಂದ ನೇತಾಜಿವರೆಗೆ

Update: 2024-02-22 21:34 IST

ಉಡುಪಿ: ಉಡುಪಿಯ ಕೂರ್ಮ ಫೌಂಡೇಷನ್‌ನ ವತಿಯಿಂದ ಫೆ.24ರಂದು ಸಂಜೆ 5ರಿಂದ ರಾತ್ರಿ 8ಗಂಟೆವರೆಗೆ ಉಡುಪಿಯ ಪುರಭವನದಲ್ಲಿ ‘ಆಝಾದ್ ಹಿಂದ್- ಶಿವಾಜಿಯಿಂದ ನೇತಾಜಿಯವರೆಗೆ’ ಕಾರ್ಯಕ್ರಮ ನಡೆಯಲಿದೆ ಎಂದು ಫೌಂಡೇಷನ್‌ನ ಅಧ್ಯಕ್ಷ ಶ್ರೀಕಾಂತ ಶೆಟ್ಟಿ ಕಾರ್ಕಳ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಪ್ರಖ್ಯಾತ ವಾಗ್ಮಿ ಸಂದೀಪ್ ಮಹಿಂದ್ ಹಾಗೂ ಕರ್ನಾಟಕದ ಪತ್ರಕರ್ತ ಹಾಗೂ ಸುದ್ದಿವಾಹಿನಿಯ ನಿರೂಪಕ ಅಜಿತ್ ಹನುಮಕ್ಕನವರ್ ಭಾಗ ವಹಿಸಲಿದ್ದು, ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದರು.

ಸಂಜೆ ೫ಗಂಟೆಗೆ ಪ್ರಾರಂಭಗೊಳ್ಳುವ ಕಾರ್ಯಕ್ರಮದಲ್ಲಿ ಮೊದಲಿಗೆ ಗಾಯಕ ರಜತ್ ಮಯ್ಯ ಮತ್ತು ತಂಡದಿಂದ ಸ್ವರ ಭಾರತಿ ಗಾಯನ, ಬಳಿಕ ಮಂಜರಿಚಂದ್ರ ಮತ್ತು ಸಹಕಲಾವಿದರಿಂದ ನೃತ್ಯರೂಪಕ ‘ನಮೋನಮೋ ಭಾರತಾಂಬೆ’ ನಡೆಯಲಿದ್ದು, 7ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೂರ್ಮ ಪೌಂಡೇಷನ್‌ನ ಗೌರವಾಧ್ಯಕ್ಷ ಅಜಯ್ ಪಿ.ಶೆಟ್ಟಿ, ಪ್ರವೀಣ್ ಯಕ್ಷಿಮಠ, ಸುಜಿತ್ ಶೆಟ್ಟಿ, ಸೂರಜ್ ಕಿದಿಯೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News