×
Ad

268ನೇ ಹಸಿರುಜೀವ ಸಮರ್ಪಣಾ ಅಭಿಯಾನ

Update: 2025-08-25 20:37 IST

ಕೋಟ, ಆ.25: ಓರ್ವ ವ್ಯಕ್ತಿ ಸಾಮಾಜಿಕ ಚಟುವಟಿಕೆಯ ಮೂಲಕ ಈ ಸಮಾಜಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡಿ ಅತಿ ಚಿಕ್ಕ ಸಮಯದಲ್ಲಿ ಜನಸಾಮಾನ್ಯರ ಮನಸ್ಸನ್ನು ಗೆದ್ದಿದ್ದಾರೆ ಎಂದು ಕೋಟದ ಮಣೂರು ಮಹಾ ಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಎಚ್. ಕುಂದರ್ ಹೇಳಿದ್ದಾರೆ.

ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ ಕೋಟ,ಜೆಸಿಐ ಸಿನಿಯರ್ ಲಿಜನ್ ಕೋಟ, ಇಂಡಿಕಾ ಕಲಾ ಬಳಗ ಪಡುಕರೆ ಇವರ ಸಹಯೋಗದೊಂದಿಗೆ 268ನೇ ರವಿವಾರದ ಪರಿಸರಸ್ನೇಹಿ ಹಸಿರುಜೀವ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಈ ಸಂದರ್ಭದಲ್ಲಿ ಕೋಟ ರಾಷ್ಟ್ರೀಯ ಹೆದ್ದಾರಿ ಹಲವು ಭಾಗಗಳಲ್ಲಿ ಗಿಡ ನೆಡಲಾಯಿತು. ಕೋಟ ಗ್ರಾಪಂ ಸದಸ್ಯ ಅಜಿತ್ ದೇವಾಡಿಗ, ಪಂಚ ವರ್ಣದ ಉಪಾಧ್ಯಕ್ಷರಾದ ದಿನೇಶ್ ಆಚಾರ್, ಸಂತೋಷ್ ಪೂಜಾರಿ, ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್, ಜೆಸಿಐ ಕೋಟ ಸಿನಿಯರ್ ಲಿಜನ್ ಅಧ್ಯಕ್ಷ ಕೇಶವ ಆಚಾರ್, ಇಂಡಿಕಾ ಕಲಾ ಬಳಗ ಪಡುಕರೆ ಇದರ ಪ್ರಭಾಕರ್, ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಲಹಾ ಸಮಿತಿಯ ರವೀಂದ್ರ ಕೋಟ ಸಂಯೋಜಿಸಿದರು. ಗೀತಾನಂದ ಫೌಂಡೇಶನ್ ಮಣೂರು, ಅನ್ನಪೂರ್ಣ ನರ್ಸರಿ ಪೇತ್ರಿ, ಸುವರ್ಣ ಎಂಟರ್ಪ್ರೈಸ್ ಬ್ರಹ್ಮಾವರ, ಸಮುದ್ಯತಾ ಕೋಟ ಗಿಡ ನೀಡಿ ಸಹಕರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News