ಮಾ.27: ಮಣಿಪಾಲದಲ್ಲಿ ನಿಧಿ ಆಪ್ಕೆ ನಿಕಟ್
ಉಡುಪಿ: ನಿಧಿ ಆಪ್ಕೆ ನಿಕಟ್/ ಭವಿಷ್ಯನಿಧಿ ನಿಮ್ಮ ಹತ್ತಿರ ಎಂಬುದು ಭವಿಷ್ಯನಿಧಿ ಸದಸ್ಯರ ಹಾಗೂ ಪಿಂಚಣಿದಾರರ ಕುಂದುಕೊರತೆ ಗಳನ್ನು ಪರಿಹರಿಸಲು ಹಾಗೂ ಅವರಲ್ಲಿ ಜಾಗೃತಿ ಮೂಡಿಸಲು ಭವಿಷ್ಯ ನಿಧಿ ಸಂಘಟನೆಯ ಪ್ರಧಾನ ಕಚೇರಿ ಹೊಸದಿಲ್ಲಿಯಿಂದ ಪ್ರಾರಂಭಿಸಿದ ಜಿಲ್ಲಾ ಮಾಸಿಕ ಕಾರ್ಯ ಕ್ರಮವಾಗಿದೆ.
ಅದರಂತೆ ಮಾರ್ಚ್ ತಿಂಗಳ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ ಇದೇ ಮಾ.27ರ ಬೆಳಗ್ಗೆ ಮಣಿಪಾಲದ ಗೀತಾ ಮಂದಿರದ ಬಳಿ ಇರುವ ಪ್ರೆಸ್ ಕಾರ್ನರ್‌ನಲ್ಲಿ ನಡೆಯಲಿದೆ.
ನಿಧಿ ಆಪ್ಕೆ ನಿಕಟ್ ಎಂಬುದು ತನ್ನ ಲಕ್ಷಾಂತರ ಚಂದಾದಾರರಿಗೆ ತನ್ನ ವಿವಿಧ ಸೇವೆಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವುದನ್ನು ಖಚಿತ ಪಡಿಸಿಕೊ ಳ್ಳಲು ಭವಿಷ್ಯ ನಿಧಿ ಸಂಸ್ಥೆಯ ಪ್ರಯತ್ನವಾಗಿದೆ. ಜಿಲ್ಲೆಯಲ್ಲಿ ಕೇಂದ್ರೀಕರಿಸಿ ಒಗ್ಗೂಡಿಸುವ ಗುರಿಯನ್ನು ಇದು ಹೊಂದಿದೆ. ಇದು ಉದ್ಯೋಗದಾತರು ಹಾಗೂ ಉದ್ಯೋಗಿಗಳಿಗೆ ಸಹಭಾಗಿತ್ವದ ಅರಿವು ಮೂಡಿಸುವ ಕಾರ್ಯಕ್ರಮ.
ಸದಸ್ಯರ ಕುಂದುಕೊರತೆಗೆ ಪರಿಹಾರ ಮತ್ತು ಮಾಹಿತಿ ವಿನಿಮಯ ವೇದಿಕೆಯಾಗಿ ಇದು ಏಕಕಾಲದಲ್ಲಿ ಕಾರ್ಯನಿರ್ವಹಿಸಲಿದೆ. ಎಲ್ಲಾ ಪಿಎಫ್ ಚಂದಾದಾರರು, ಇಪಿಎಸ್ ಪಿಂಚಣಿದಾರರು, ಪಿಎಫ್ ವ್ಯಾಪ್ತಿಗೆ ಒಳಪಡುವ ಸಂಸ್ಥೆಗಳ ಉದ್ಯೋಗದಾತರು, ಟ್ರೇಡ್ ಯೂನಿಯನ್‌ಗಳ ಮುಖಂಡರು ಹಾಗೂ ಸದಸ್ಯರು ಇದರಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳುವಂತೆ ಉಡುಪಿ ಕ್ಷೇತ್ರೀಯ ಕಾರ್ಯಾಲಯದ ಕ್ಷೇತ್ರೀಯ ಭವಿಷ್ಯನಿಧಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.