ನ.28ರಿಂದ ಮುಂಡ್ಕೂರಿನಲ್ಲಿ ಶ್ರೀಗೋಕರ್ಣ ಮಠಾಧೀಶರ ಮೊಕ್ಕಾಂ
Update: 2023-11-25 20:50 IST
ಮುಂಡ್ಕೂರು, ನ.25: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಗುರುಪೀಠ ಗಳಲ್ಲಿ ಒಂದಾದ ಶ್ರೀಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಶ್ರೀಮದ್ ವಿದ್ಯಾಧೀಶತೀರ್ಥ ವಡೇರ್ ಸ್ವಾಮೀಜಿ ಅವರು ಮುಂಡ್ಕೂರು ಶ್ರೀವಿಠೋಬ ದೇವಸ್ಥಾನದಲ್ಲಿ ನವೆಂಬರ್ 28ರಿಂದ ಡಿಸೆಂಬರ್ 4ವರೆಗೆ ಮೊಕ್ಕಾಂ ಮಾಡಲಿದ್ದಾರೆ.
ನ.28ರ ಸಂಜೆ ಉತ್ತರಕನ್ನಡದ ಅಂಕೋಲಾ ಮೊಕ್ಕಾಂನಿಂದ ಮುಂಡ್ಕೂರಿಗೆ ಆಗಮಿಸಲಿರುವ ಶ್ರೀ ಗೋಕರ್ಣ ಮಠಾಧೀಶ ರನ್ನು ಸಕಲ ಬಿರುದು-ಬಾವಲಿ ಹಾಗೂ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಗುವುದು. ಡಿ.3ರಂದು ಸಂಜೆ ಸ್ವಾಮೀಜಿ ಯವರ ದಿಗ್ವಿಜಯ ಸಂಪನ್ನಗೊಳ್ಳಲಿದೆ. ಡಿ.4ರಂದು ಸ್ವಾಮೀಜಿ ಅವರನ್ನು ಬ್ರಹ್ಮಾವರ ಮೊಕ್ಕಾಂಗೆ ಬೀಳ್ಕೊಡಲಾಗುವುದು. ಮೊಕ್ಕಾಂನ ಎಲ್ಲಾ ದಿನಗಳಲ್ಲಿ ಮಧ್ಯಾಹ್ನ ಹಾಗೂ ರಾತ್ರಿಅನ್ನಸಂತರ್ಪಣೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳಿರುತ್ತವೆ ಎಂದು ಶ್ರೀವಿಠೋಬ ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.