ಕೋಡಿ ಬ್ಯಾರೀಸ್‌ನಲ್ಲಿ 41ನೇ ‘ಸ್ವಚ್ಛ ಕಡಲತೀರ -ಹಸಿರು ಕೋಡಿ’ ಅಭಿಯಾನ
ಕುಂದಾಪುರ, ಸೆ.6: ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ 41ನೇ ‘ಸ್ವಚ್ಛ ಕಡಲತೀರ- ಹಸಿರು ಕೋಡಿ’ ಅಭಿಯಾನವು ಶನಿವಾರ ಜರಗಿತು.
ಮುಖ್ಯ ಅತಿಥಿಯಾಗಿ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಉಪನಿರೀಕ್ಷಕಿ ಮುಕ್ತಾ ಬಾಯಿ ಹಾಗೂ ಸಹಾಯಕ ಉಪ ನಿರೀಕ್ಷಕಿ ಸಂತೋಷ್ ಕುಮಾರ್ ಮಾತನಾಡಿದರು.
‘ತಂದೆ ತಾಯಿಯವರು ನಮಗೆ ಮೊದಲ ಗುರು ಅವರಿಗೂ ಶುಭಾಶಯ ಸಲ್ಲಬೇಕು. ವಿದ್ಯಾರ್ಥಿ ಜೀವನದಲ್ಲಿಯೇ ಸಮಾಜದ ಕಣ್ಣನ್ನು ಯಾವ ರೀತಿ ತೆರೆಸಬೇಕು. ಪರಿಸರದ ಸ್ವಚ್ಛತೆಯ ಮಹತ್ವದ ಕುರಿತು ನಿಮಗೆ ಈ ಸಂಸ್ಥೆ ತಿಳಿಸಿಕೊಡುತ್ತಿದೆ. ಸಮುದ್ರ ಯಾವುದೇ ತ್ಯಾಜ್ಯವನ್ನು ತನ್ನಲ್ಲಿಟ್ಟುಕೊಳ್ಳದೆ, ಅದೆಲ್ಲವನ್ನು ಹೊರಗೆ ಹಾಕುತ್ತದೆ. ಅದರಂತೆ ಸಮುದ್ರದ ಪಕ್ಕದಲ್ಲಿಯೇ ಇರುವ ಈ ಸಂಸ್ಥೆ ಸ್ವಚ್ಛತಾ ಕಾರ್ಯಕ್ಕೆ ಆದ್ಯತೆ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮುಕ್ತಾ ಬಾಯಿ ತಿಳಿಸಿದರು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಎಂ.ಅಬ್ದುಲ್ ರೆಹಮಾನ್ ಬ್ಯಾರಿ ಅಧ್ಯಕ್ಷತೆ ವಹಿಸಿದ್ದರು. ಅಭಿಯಾನದಲ್ಲಿ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಸಿಬ್ಬಂದಿ, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿಶ್ವಸ್ಥ ಮಂಡಳಿ ಸದಸ್ಯ ಡಾ.ಆಸೀಫ್ ಬ್ಯಾರಿ, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ವಿಭಾಗಗಳ ಮುಖ್ಯಸ್ಥರು, ವಿವಿಧ ಅಂಗ ಸಂಸ್ಥೆಗಳ ಶಾಲಾಭಿವೃದ್ಧಿ ಮತ್ತು ಸಲಹಾ ಮಂಡಳಿಯ ಸರ್ವಸದಸ್ಯರು, ಗಣ್ಯರು, ಪೋಷಕರು, ಬೋಧಕ ಬೋಧಕೇತರ ಸಿಬ್ಬಂದಿಗಳು ಮತ್ತು ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು. ಕನ್ನಡ ಉಪನ್ಯಾಸಕಿ ಸುಮನಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.