×
Ad

8ನೇ ವರ್ಷದ ಶ್ರೀಶಾರದೋತ್ಸವ ‘ಉಡುಪಿ ದಸರಾ’ಗೆ ಚಾಲನೆ

Update: 2023-10-21 18:34 IST

ಉಡುಪಿ, ಅ.21: ಉಡುಪಿ ಸಾರ್ವಜನಿಕ ಶ್ರೀಶಾರದೋತ್ಸವ ಸಮಿತಿ ವತಿಯಿಂದ ನ.23ರವರೆಗೆ ನಡೆಯಲಿರುವ 8ನೇ ವರ್ಷದ ಶ್ರೀಶಾರದೋತ್ಸವ ಉಡುಪಿ ದಸರಾಗೆ ಅಜ್ಜರಕಾಡು ಶ್ರೀಗೋವಿಂದ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ ಧಾರ್ಮಿಕ ಸಭೆಯನ್ನು ಉದ್ಘಾಟಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಪ್ರಮುಖರಾದ ಗಣೇಶ್ ಕುಮಾರ್, ರಾಧಾಕೃಷ್ಣ ಮೆಂಡನ್, ಜ್ಯೋತಿ ದೇವಾಡಿಗ, ಸರೋಜ ಯಶವಂತ್, ಶೋಭಾ ಶೆಟ್ಟಿ, ಉದ್ಯಮಿಗಳಾದ ಅಂಡಾರು ದೇವಿಪ್ರಸಾದ್ ಶೆಟ್ಟಿ, ಮನೋಹರ್ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ನಾಗೇಶ್ ಹೆಗ್ಡೆ, ಮಟ್ಟು ಲಕ್ಷೀ ನಾರಾಯಣ ರಾವ್, ತಾರಾ ಆಚಾರ್ಯ , ಪದ್ಮಾ ರತ್ನಕಾರ, ಸರೋಜ ರಾವ್, ಹರೀಶ್, ಸುರೇಶ್ ಶೇರಿಗಾರ್, ಸುಜಾತ, ಸತೀಶ್ ಕುಮಾರ್, ಮಹೇಶ್ ಪೂಜಾರಿ ಉಪಸ್ಥಿತರಿದ್ದರು.

ಸಮಿತಿ ಅಧ್ಯಕ್ಷ ಸುಪ್ರಸಾದ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ದರು. ಉಡುಪಿ ಪರಿಸರದ ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ ನಡೆಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News