ಹಾರ್ಡ್‌ವೇರ್ ಅಂಗಡಿಗೆ ನುಗ್ಗಿ ನಗದು ಕಳವು
Update: 2023-08-07 20:52 IST
ಬೈಂದೂರು, ಆ.7: ನಾವುಂದ ಗ್ರಾಮದ ಬಡಾಕರೆ ಕ್ರಾಸ್ ಬಳಿಯ ಹಾರ್ಡ್ ವೇರ್ ಅಂಗಡಿಗೆ ಆ.5ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಕರುಣಾಕರ ಶೆಟ್ಟಿ ಎಂಬವರ ಅಂಗಡಿಯ ಎದುರಿನ ರೇಕ್ಸ್ ಮೇಲಿನಿಂದ ಹತ್ತಿ ನುಗ್ಗಿದ ಕಳ್ಳರು, ಎರಡೂ ಕ್ಯಾಶ್ ಡ್ರವರ್ ನಲ್ಲಿಟ್ಟಿದ್ದ 40ಸಾವಿರ ರೂ. ಕಳ್ಳತನ ಮಾಡಿ ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.