ಇಲಿ ಪಾಷಾಣ ತಿಂದು ಯುವಕ ಮೃತ್ಯು
Update: 2024-08-14 19:00 IST
ಬೈಂದೂರು: ಇಲಿ ಪಾಷಾಣ ಸೇವಿಸಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಉಳ್ಳೂರು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಉಳ್ಳೂರು ಗ್ರಾಮದ ಗಜೇಂದ್ರ(37) ಎಂದು ಗುರುತಿಸಲಾಗಿದೆ. ಆ.10ರಂದು ಸಂಜೆ ಮನೆಯಲ್ಲಿದ್ದ ಇಲಿ ಪಾಷಾಣ ತಿಂದು ಅಸ್ವಸ್ಥಗೊಂಡ ಗಜೇಂದ್ರ, ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಆಸ್ಪತ್ರೆಯಲ್ಲಿ ಆ.13 ರಂದು ಮಧ್ಯಾಹ್ನ ಮೃತಪಟ್ಟರು ಎಂದು ತಿಳಿದುಬಂದಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.