×
Ad

ಅಖಿಲ ಭಾರತ ಅಂತರ ವಿವಿ ಪುರುಷರ ಕಬಡ್ಡಿ ಟೂರ್ನಿ: ಮಂಗಳೂರು ವಿವಿ ಚಾಂಪಿಯನ್

Update: 2023-11-26 15:12 IST

ಉಡುಪಿ: ಆತಿಥೇಯ ಮಂಗಳೂರು ವಿ ವಿ ತಂಡ ಮೊತ್ತ ಮೊದಲ ಬಾರಿಗೆ ರಾಷ್ಟ್ರೀಯ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ಕಬಡ್ಡಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.

ಇಂದು ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆತಿಥೇಯ ಮಂಗಳೂರು ವಿವಿ ತಂಡ ಚೆನ್ನೈ ನ ವೆಲ್ಸ್ ವಿವಿ ತಂಡವನ್ನು 47-15 ಅಂಕಗಳ ಆಂತರದಿಂದ ಏಕಪಕ್ಷೀಯವಾಗಿ ಹಿಮ್ಮೆಟ್ಟಿಸಿತು.

ಹಿಂದೆ ಎರಡು ಬಾರಿ ರಾಷ್ಟ್ರೀಯ ಫೈನಲ್ ನಲ್ಲಿ ಆಡಿದ್ದರೂ ಎರಡೂ ಬಾರಿ ಸೋತು ರನ್ನರ್ ಅಪ್ ಆಗಿದ್ದ ಮಂಗಳೂರು ವಿವಿ 33 ವರ್ಷಗಳ ಬಳಿಕ ಮತ್ತೆ ಫೈವಲ್ ಪ್ರವೇಶಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ತಂಡದ ಪರವಾಗಿ ರತನ್,ಯಶ್, ಮಾಯಾಂಕ್ ಅತ್ತ್ಯುತ್ತಮವಾಗಿ ಆಡಿದರು.





 


 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News