×
Ad

ಹಿಂದೂ ಸಂಗಮದಲ್ಲಿ ಅಂಬೇಡ್ಕರ್ ಚಿತ್ರ: ಜಯನ್ ಮಲ್ಪೆ ಆಕ್ಷೇಪ

Update: 2026-01-27 18:36 IST

ಉಡುಪಿ, ಜ.27: ಧಾರ್ಮಿಕತೆಯಿಂದ ಜಾತಿಯತೆಯನ್ನು ಭೋಧಿಸುವ, ಕುಡಿಯಲೂ ನೀರು ಕೊಡದ, ಕೊನೆ ಪಕ್ಷ ದೇವರನ್ನೂ ನೋಡಲು ಬಿಡದ ಹಿಂದೂ ಧರ್ಮ ಧರ್ಮವೇ ಅಲ್ಲ ಎಂದು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಹೇಳಿದ್ದರೂ, ಅವರ ಭಾವಚಿತ್ರವನ್ನು ಹಿಂದೂ ಸಮಾಜೋತ್ಸವದಲ್ಲಿ ಬಳಲುತ್ತಿರುವ ಬಗ್ಗೆ ಜನಪರ ಹೋರಾಟಗಾರ ಜಯನ್ ಮಲ್ಪೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಉಡುಪಿ ಜಿಲ್ಲೆಯ ಹಲವು ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಹಿಂದೂ ಸಂಗಮದ ಹೆಸರಿನಲ್ಲಿ ನಡೆಯುವ ಸಮಾಜ್ಯೋತ್ಸವದ ಬ್ಯಾನರ್, ಹಾಗೂ ಕಟಾಟ್‌ಗಳಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಬಳಸಲಾಗುತ್ತಿದೆ. 1956ರ ಅ.14ರಂದು ಡಾ.ಬಾಬಾ ಸಾಹೇಬ ಅಂಬೇಡ್ಕರ್ ಹಿಂದೂ ಧರ್ಮ ಬಿಟ್ಟು ಬೌದ್ಧ ಧರ್ಮವನ್ನು ಸ್ವೀಕರಿಸುವ ಮೊದಲೇ 1935ರ ಅ.13ರಂದು ನಾನು ಹಿಂದೂವಾಗಿ ಹುಟ್ಟಿದ್ದರೂ ಹಿಂದೂವಾಗಿಯೇ ಸಾಯಲಾರೆ ಎಂದು ಘೋಷಿಸಿದ್ದರು. ಈ ವಾಸ್ತವ ವಿಚಾರ ಗೊತ್ತಿದ್ದರೂ ಅವರಿಗೆ ಅವಮಾನ ಮಾಡುವ ಉದ್ದೇಶದಿಂದ ಹಿಂದೂ ಸಮಾಜ್ಯೋತ್ಸವದಲ್ಲಿ ಅವರ ಭಾವಚಿತ್ರ ಬಳಸುವುದು ಖಂಡನೀಯ ಎಂದು ಅವರು ತಿಳಿಸಿದ್ದಾರೆ.

ಅಸ್ಪೃಶ್ಯತಾ ಸಮಸ್ಯೆ ಹಿಂದೂ ಮತ್ತು ದಲಿತರ ನಡುವಿನ ಸಂಘರ್ಷ ವಾಗಿದೆ. ಹಿಂದೂಗಳ ಮುಂದೆ ಮಂಡಿಯೂರಿ ಜಾತಿಪದ್ದತಿಯನ್ನು ಒಪ್ಪಕೊಳ್ಳುವ ಬದಲು ದಲಿತರು ಸ್ವಾಭಿಮಾನದಿಂದ ಶಕ್ತಿಶಾಲಿಯಾಗಿ ಇದರ ವಿರುದ್ಧ ಹೋರಾಟದಲ್ಲಿ ಜಯಗಳಿಸಬೇಕು ಎಂದಿದ್ದಾರೆ. ದಲಿತ ಸಮಾಜ ವನ್ನು ಮತ್ತು ಅಂಬೇಡ್ಕರನ್ನು ಉದ್ದೇಶಪೂರ್ವಕ ವಾಗಿ ಅವಮಾನ ಮಾಡುವ ಹಿಂದೂ ಸಮಾಜ್ಯೋತ್ಸವದ ಸಂಘಟಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಜಯನ್ ಮಲ್ಪೆ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News